Site icon TUNGATARANGA

ಶಿವಮೊಗ್ಗ ಜಿಲ್ಲೆಯಲ್ಲಿ ಸೊಂಕಿನ ಜಾತ್ರೆ / ಶಿಕಾರಿಪುರದಲ್ಲೇ 110!

ಶಿವಮೊಗ್ಗ, ಆ.13:
ನಿಮಗೇನೂ ಸಮಸ್ಸೆ ಇಲ್ಲ ಅಂದ್ರೆ ಡೊಂಟ್ ವರಿ…, ಅನಗತ್ಯ ಒತ್ತಡ, ಭಯ, ಯೋಚನೆ, ಮುಲಾಜಿನ ಮಾತುಕತೆ ಬಗ್ಗೆ ಚಿಂತಿಸದಿರಿ. ಕೊರೊನಾ ಕಿರಿಕ್ ಏನಲ್ಲ.
ಶಿವಮೊಗ್ಗದಲ್ಲಿನ ಇಂದಿನ ವರದಿಯಲ್ಲಿ ನಿನ್ನೆಗಿಂತ ಅಂದರೆ ಎಂದಿಗಿಂತ ಅಧಿಕ ಸೊಂಕಿತರಿದ್ದಾರೆ. ಇವತ್ತೂ ಸಹ ಎರಡೂವರೆ ದಶಕ ದಾಟಿದೆ.
ಇಂದು 262 ಜನರಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದೆ.
ಶಿವಮೊಗ್ಗದ ಕೋವಿಡ್ ಚೆಕ್ ಮಾಡಿಸಿಕೊಂಡ 1542 ಜನರಲ್ಲಿ 908 ಜನರಿಗೆ ನೆಗಿಟೀವ್ ಬಂದಿದ್ದು ಉಳಿದವರಿಗೆ ಪಾಸೀಟೀವ್ ಬಂದಿದೆ. 262 ಜನರಿಗೆ ಪಾಸಿಟೀವ್ ಬಂದಿದೆ. ಶಿವಮೊಗ್ಗ ನಗರದ ಜೊತೆ ಶಿಕಾರಿಪುರವೂ ಸಂಪೂರ್ಣಮಯವಾಗ ಹೊರಟಿದೆ.
ಶಿವಮೊಗ್ಗ ಜಿಲ್ಲೆಯ ಕೊರೊನಾ ಸಾವಿನ ಕಂಟಕಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಸಹ 2 ಜನರು ಸಾವು ಕಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ನಿಧನ ಹೊಂದಿದವರ ಸಂಖ್ಯೆ 68 ಬಂದಿರುವುದು ಆತಂಕದ ಸಂಗತಿ. ಇಂದಿನ ಈ ಜಿಲ್ಲಾ ವರದಿಯಲ್ಲಿ ಶಿವಮೊಗ ಜಿಲ್ಲೆಯಲ್ಲಿ 262 ಜನರಿಗೆ ಸೊಂಕು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯ ವರದಿಯಲ್ಲಿ ಇಂದಿನ ಸಂಖ್ಯೆ ಎಂದಿನಂತೆ ವ್ಯತ್ಯಾಸವಾಗಿದೆ.
ಇದು ಜನಸಾಮಾನ್ಯರಿಗಿಂತ ಹೆಚ್ಚು ಅನ್ಯರಿಗೆ ಅಂದರೆ ಇತರೆ ಕಾಯಿಲೆ ಹೊಂದಿದವರು, ಸ್ಥಿತಿವಂತರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ನೌಕರರನ್ನೆ ಕಾಡುತ್ತಿದೆ. ಇದು ನಮ್ಮ ಇಂದಿನ ವ್ಯವಸ್ಥೆಯ ಬುಡಗಳಿಗೆ ಟಾರ್ಗೇಟ್ ಮಾಡುತ್ತಿರುವುದು ಕಂಡುಬರುತ್ತಿದೆ.
ಇಂದು ಸಂಜೆ ಹೊರಬಿದ್ದ ಶಿವಮೊಗ್ಗ ಕೋವಿಡ್-19 ವರದಿಯಲ್ಲಿ ಎರಡು ದಶಕ ಪಾಸಿಟಿವ್ ಬಂದಿದೆ.
ಭಯ ಬರುವಂತಹ ಕಾರಣ ಎಲ್ಲೆಡೆ ಕೊರೊನಾ ಕಂಟಕ ಕಾಣುತ್ತಿರುವುದು ಎನ್ನಲಾಗಿದೆ.
ಇವತ್ತು 178 ಜನ ಡಿಸ್ಚಾರ್ಜ್ ಆಗಿದ್ದರೂ ಸಹ 3757 ಸೋಂಕಿತರಲ್ಲಿ 2431 ಜನ ಗುಣಮುಖರಾಗಿದ್ದಾರೆ.
ಇಂದಿನ ಈ ವರದಿಯಲ್ಲಿ ಇಂದು ರಕ್ಕಸ ನರ್ತನ ಕ್ಷೇತ್ರವನ್ಮಾಗಿಸಿದ ಸಿ.ಎಂ. ಕ್ಷೇತ್ರ ಶಿಕಾರಿಪುರದಲ್ಲಿ 110, ಶಿವಮೊಗ್ಗದಲ್ಲಿ ರಾಕ್ಷಸ ಕಳೆಯೆಂಬಂತೆ 67, ಭದ್ರಾವತಿಯಲ್ಲಿಯೂ 59, ಸಾಗರದಲ್ಲಿ 11, ಹೊಸನಗರ 09, ತೀರ್ಥಹಳ್ಳಿಯಲ್ಲಿ 04, ಹೊಸನಗರದಲ್ಲಿ 02, ಸೊರಬದಲ್ಲಿ 02 ಪ್ರಕರಣ ಪತ್ತೆಯಾಗಿವೆ. ಹೊರಜಿಲ್ಲೆಯ 07 ಪ್ರಕರಣಗಳು ಪತ್ತೆಯಾಗಿವೆ.
ಇಂದಿನವರೆಗೆ ಸಾವು ಕಂಡವರ ಸಂಖ್ಯೆ 68 ಆಗಿದ್ದು, ಅದರ ಸಂಖ್ಯೆ ಹೆಚ್ಚಾಗುತ್ತಿದೆ. ದಿನೇ ದಿನೇ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ.
ಜಾಗೃತೆ ಮಾತ್ರ ನಮ್ದಾಗಿದೆ. ಯಾರನ್ನೂ ನಂಬುವಂತಿಲ್ಲ. ಸರ್ಕಾರದ ಆಸರೆ ಹಣದ ಹಿಂದೆ ಅನ್ಯ ವ್ಯವಹಾರ ಜೊತೆಗಿರುವಂತಿದೆ.

Exit mobile version