ಶಿವಮೊಗ್ಗ, ಮೇ.
ಗೋಶಾಲೆ ನಡೆಸುವುದು ಮತ್ತು ಗೋಸೇವೆ ಮಾಡುವುದು ಪವಿತ್ರ ಕಾರ್ಯ. ಅನಾಥ, ಅಪಘಾತಕ್ಕೆ ಒಳಗಾದ ಮತ್ತು ವಯಸ್ಸಾದ ಗೋವುಗಳ ಆರೈಕೆ ಮಾಡುತ್ತಿ ರುವ ಶ್ರೀ ಜ್ಞಾನೇಶ್ವರಿ ಗೋಶಾಲೆ ಉತ್ತಮ ಕೆಲಸ ಮಾಡುತ್ತಾ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಅವರು ಶ್ರೀ ಜ್ಞಾನೇಶ್ವರಿ ಗೋಶಾಲಾ ಟ್ರಸ್ಟ್ ಸಮೀಪದ ಹುಣಸೋಡು ಗ್ರಾಮದಲ್ಲಿ ಶ್ರೀ ಜ್ಞಾನೇಶ್ವರಿ ಗೋಶಾಲಾ ನೂತನ ಕಟ್ಟಡ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ವಯಸ್ಸಾದ ಗೋಗಳ ಸೇವೆಯಂತೆ ವಯ ಸ್ಸಾದ ಹೆತ್ತ ತಂದೆತಾಯಿಗಳನ್ನು ವೃದ್ಧಾ ಶ್ರಮಕ್ಕೆ ಕಳುಸದೆ ಆಶ್ರಯ ನೀಡುವುದು ಮಹತ್ವದ ಸೇವೆಯೂ ಆಗಿದೆ. ಆದರೆ ಹೆಚ್.ಎಫ್. ಗಂಡುಕರುಗಳನ್ನು ಕಾಸಾಯಿ ಖಾನೆ ನೀಡುವುದನ್ನು ನಿಲ್ಲಿಸುವಂತೆ ಕೋರಿದರು. ಶ್ರೀ ಜ್ಞಾನೇಶ್ವರಿ ಗೋಶಾಲಾ ಗೋಸೇವಾ ಕಾರ್ಯದಲ್ಲಿ ತೊಡಗಿ, ಇಂದು ಸ್ವಂತ ಜಾಗದಲ್ಲಿ ಉತ್ತಮ ಗೋಶಾಲೆ ನಿರ್ಮಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹ ಕಾರ್ಯಕ್ಕೆ ಸರ್ಕಾರದ ಸಹಕಾರ ಯಾವತ್ತು ಇರುವುದು. ಶಾಸಕರ ಕ್ಷೇತ್ರಾಭಿ ವೃದ್ಧಿ ನಿಧಿಯಿಂದ ೫ ಲಕ್ಷ ಅನುದಾನ ಪ್ರಕಟಿಸಿದರು.
ಗೋಶಾಲಾ ಕಟ್ಟಡ ಉದ್ಘಾಟಿಸಿ ಮತ್ತು ಗೋಪೂಜೆ ನೆರವೇರಿಸಿ, ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾಸ್ವಾಮಿಗಲು ವಹಿಸಿ ಆಶೀರ್ವಚನ ನೀಡುತ್ತಾ ಉತ್ತಮ ಪರಿಸರದ ಹುಣಸೋಡು ಗ್ರಾಮದಲ್ಲಿ ಗೋಶಾಲೆಯನ್ನು ವ್ಯವಸ್ತಿತವಾಗಿ ನಿರ್ಮಿ ಸಲಾಗಿದೆ. ಗೋಸೇವೆ ಮತ್ತು ಗೋಮಾತೆಯ ಅನುಗ್ರಹದಿಂದ ಸಮಾಜ ಉನ್ನತಿ ಪಡೆಯಲು ಸಾಧ್ಯ. ಶ್ರೀ ಮಠದ ಆರಾಧ್ಯ ದೇವತೆ ಶ್ರೀ ಜ್ಞಾನೇಶ್ವರಿ ಗೋಶಾಲೆ ನಡೆಸುತ್ತಿ ರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಭಾಗವಹಿಸಿದ ಶಿವಮೊಗ್ಗ ಮಹಾನಗರಪಾಲಿಕೆಯ ಮೇಯರ್ ಸುನೀತಾ ಅಣ್ಣಪ್ಪ ಮಾತನಾಡಿ ಮಹಾನಗರ ವ್ಯಾಪ್ತಿಯಲ್ಲಿ ಗೋಕ್ರಿಮೆಟೋರಿಯ ಕಾರ್ಯಕ್ರಮದ ಅಡಿಯಲ್ಲಿ ಗೋಗಳ ಗೌರವಯುತ ಅಂತ್ಯಸಂಸ್ಕಾರಕ್ಕಾಗಿ ಜೆಸಿಬಿ ಮುಂತಾದ ಸೌಲಭ್ಯ ನೀಡಲಾಗುತ್ತದೆಂದರು.
ಗೋಶಾಲಾ ಕಟ್ಟಡದ ಲೋಕಾರ್ಪಣಾ ಸಮಾರಂಭವದ ಅಧ್ಯಕ್ಷತೆಯನ್ನು ಜ್ಞಾನೇಶ್ವರಿ ಟ್ರಸ್ಟ್‌ನ ಅಧ್ಯಕ್ಷ ಚಂದ್ರಹಾಸ ಪಿ.ರಾಯ್ಕರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ವಾಸುದೇವ ರಾಯ್ಕರ್, ದಾವಣಗೆರೆ, ಶ್ರೀ ಶಿವಯೋಗಿ ಯೆಲಿ, ಉಪನಿರ್ದೇಶಕರು ಪಶುಸಂಗೋಪನೆ ಇಲಾಖೆ, ಶ್ರೀ ಮಠದ ಟ್ರಸ್ಟ್ ಕಾರ್ಯದರ್ಶಿ ಶ್ರೀ ರಘುನಾಥ್ ಪಿ.ರಾಯ್ಕರ್, ಶ್ರೀ ಬಿಳಕಿ ಕೃಷ್ಣಮೂರ್ತಿ ಮತ್ತಿತರಿದ್ದರು.