Site icon TUNGATARANGA

ಅಮ್ಮ ಅಂದ್ರೆ ಅದುವೇ ಆಕಾಶ, ಸುರಭಿ ಬರೆದ ಚಂದದ ಬರಹ

ಚಿನ್ನು ಎದ್ದೇಳು, ಎದ್ದೇಳು, , ರಂಗೋಲಿ ಹಾಕು , ಬಾಗಿಲ ಹೊಸ್ತಿಲು ಸರಿಯಾಗಿ ತೊಳಿ , ಬಿಸಿನೀರು ಕುಡಿ ದೇವರ ನಾಮ ಸರಿಯಾಗಿ ಕಲಿ, ಪೂಜೆ ಭಕ್ತಿಯಿಂದ ಮಾಡು, ಹಿರಿಯರಿಗೆ ನಮಸ್ಕರಿಸು , ಮಕ್ಕಳಿಗೆ ಸರಿಯಾಗಿ ಲೆಕ್ಕ ಹೇಳಿಕೊಡು ……. ಹೀಗೆ ಒಂದೇ ಎರಡೇ …ಮುಂಜಾನೆ ಕಣ್ಣು ಬಿಡುವಾಗಿನಿಂದ ಇರುಳ ಚಂದದ ನಿದ್ದೆಗೆ ಜಾರಲು ಕಣ್ಣು ಮುಚ್ಚುವ ವರೆಗೂ ಅಮ್ಮನ ಮಾತಿನ ಆರ್ಭಟ ಎಫ್ಎಂ ರೇಡಿಯೋ ದ ನಿನಾದದಂತೆ ನಡೆಯುತ್ತಲೇ ಇರುತ್ತದೆ. ನನ್ನಮ್ಮ ಒಮ್ಮೊಮ್ಮೆ ಕಿರಿ ಕಿರಿ ಒಮ್ಮೊಮ್ಮೆ ಜಗಳಗಂಟಿ, ಮತ್ತೊಮ್ಮೆ ಅತ್ಯುತ್ತಮ ಗೆಳತಿ, ಅದ್ಬುತ ಶಕ್ತಿ , ಎಂದೆನಿಸುತ್ತದೆ. ಅಮ್ಮನೊಂದಿಗೆ ಜಗಳ, ಮುನಿಸು, ಮುದ್ದು ಆಹಾ! ಎಷ್ಟು ಅದ್ಬುತ… ಓದುವ ವಿಷಯ ದಲ್ಲಿ.ಶಿಸ್ತಿನ ಸಿಪಾಯಿಯಂತೆ ಕಂಡರೂ ನಂಗೆ ಒಂದು ಸಣ್ಣ ನೋವಾದರೂ ತನಗೆ ಆದಂತೆ ನೋವು ಪಡುವ ನನ್ನ ಅಮ್ಮ ಎಷ್ಟು ಚಂದ….ಅಮ್ಮನ ಮಡಿ ಲೆ ಸ್ವರ್ಗ …..

ನನ್ನಮ್ಮನ ಕುರಿತು ಬರೆಯಲು ಪದಗಳೇ ಸಾಲದು...

ಅಮ್ಮ….
.ನಾ ಸೋತಾಗ ನನ್ನ ಜೀವನದ ಹಣತೆ
ಯಾಗಿ ನನ್ನ ಬಾಳಿಗೆ ತರುವಳು ಪ್ರಗತಿ
ನನ್ನ ಬಾಳ ಜೀವನದ ಸ್ಪೂರ್ತಿ
ನನ್ನಮ್ಮನ ಅಕ್ಕರೆಯ ಪ್ರೀತಿ…………

          ನನ್ನಮ್ಮ ಅಂತ ಅಲ್ಲ, ಅಮ್ಮ ಅಂದರೆ ಹಾಗೆ ಪದಗಳಿಗೂ ಸಿಗದ ಕವಿತೆ, ವರ್ಣನೆಗೂ ಎಟುಕದ ಕಾವ್ಯ. ನಾನು ಕಂಡ ಪ್ರತ್ಯಕ್ಷ ದೇವತೆ ಎಡಬಿಡದೆ ಬಿಡುವಿಲ್ಲದೆ ದುಡಿಯುವ ತ್ಯಾಗಮಯಿ. ಸಹನೆಗೆ ಪರಿಶ್ರಮ ವಾತ್ಸಲ್ಯಕ್ಕೆ ಪ್ರತಿರೂಪ ನನ್ನಮ್ಮ. .......

            ನ ನ್ನಮ್ಮನ ಕೈ ರುಚಿಯ ಬಗ್ಗೆ ಹೇಳಲೇ ಬೇಕು... ಎಲ್ಲ ಅಮ್ಮಂದಿರು ಅಡುಗೆಯಲ್ಲಿ ಅತ್ಯದ್ಭುತ ಕಲೆಗಾರರು... ಅದರಲ್ಲೂ ನನ್ನಮ್ಮ ಮಾಡುವ ರೊಟ್ಟಿ  ಕಡುಬು ನೀರುದೋಸೆ ಜೊತೆಗೆ ಕಾಯಿ ಚಟ್ನಿ,   ಹೋಳಿಗೆ,   ಚಕ್ಕುಲಿ ಆಹಾ.. ವರ್ಣಿಸಲು ಅಸಾಧ್ಯ. ಅವರು ಎನ್ ಮಾಡಿದರು ಚೆಂದ ಹೆಸರಿಲ್ಲದ ಸಾಂಬರ್‌ನಲ್ಲಿಯೂ ಕೂಡ ರುಚಿಯ ಮಹಾಸ್ವಾದ ಇರುತ್ತೆ. ಅಮ್ಮನ ಕೈ ರುಚಿನೇ ಹಾಗೇ ಪ್ರಪಂಚ ಮರೆಸುವ ಶಕ್ತಿ ಹೊಂದಿದೆ.

ಇಂದಿಗೂ ನನ್ನಮ್ಮನ ತೋಳಲ್ಲಿ ಮತ್ತೆ ಮಗುವಾಗಬೇಕೇನಿಸಿದೆ. ಅವಳ ಮಡಿಲೇರಿ ಕುಣಿಯಬೇಕು ಅನಿಸಿದೆ. ಅವರ ಕೋಪಕ್ಕೆ ಅಡಗಿ ಕುರಬೇಕಿನಿಸಿದೆ. ನನ್ನ ಹಡೆದ ನನ್ನಮ್ಮನ ಹೊತ್ತು ಲೋಕ ಸುತ್ತಬೇಕೇನಿಸಿದೆ. ಬದುಕಿನ ಪಾಠವನ್ನು ನಗುನಗುತ್ತ ಬೆತ್ತದ ಏಟಿನ ಜೊತೆಗೆ ಕಲಿಸಿದ ಮಹಾಗುರು ಜೀವನದ ಎಷ್ಟೋ ಸೂಕ್ಷ್ಮಗಳನ್ನು ಅರ್ಥ್ಯೆಸಿದ ಸಾಧ್ವಿ ನನಮ್ಮ.

    ಮಾತಿನ ಚಾಕಚಕ್ಯತೆ, ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಸತ್ಯ, ಪ್ರಾಮಾಣಿಕತೆ ಇವೆಲ್ಲ ಕೇಳದೆ ನನ್ನಮ್ಮ ನನಗಾಗಿ ಕೊಟ್ಟ ಬೆಲೆನೇ ಕಟ್ಟಲಾಗದ ಉಡುಗೊರೆಯಲ್ಲವೇ..? ಮತ್ತೆ ಮರು ಜನುಮ ಅಂತ ಇದ್ದರೆ ಈ ಮಹಾತಾಯಿಗೆ ಮಗಳಾಗಿ ಅಲ್ಲದಿದ್ದರೂ ಅವರ ಪಾದ ಧೂಳಿನ ಕಣವಾದರೂ ನಾನು ಧನ್ಯ.

ಈ ಮಾತೃ ದಿನದ ಶುಭದಿನದಂದು ನನ್ನ ಅಮ್ಮ , ಮತ್ತು ನನ್ನನು ಕಣ್ಣರೆಪ್ಪೆಯಂತೆ ಸಲಹುತ್ತಿರುವ ನನ್ನ ಅಜ್ಜಿಗೆ ಹಾಗೂ
ಜಗತ್ತಿನ ಎಲ್ಲಾ ಅಮ್ಮಂದಿರಿಗೆ ಮಾತೃ ದಿನದ ಶುಭಾಶಯಗಳು …..ಹಾಗೂ ಅಮ್ಮಂದಿರ ದಿನದ ಶುಭಾಶಯ ದೊಂದಿಗೆ ಎಲ್ಲಾ ಅಕ್ಕರೆಯ ಹೂ ಮನಸಿನ ಮುದ್ದು ಅಮ್ಮಂದಿರಿಗೆ ನನ್ನ ಈ ಪುಟ್ಟ ಲೇಖನವನ್ನು ಅರ್ಪಿಸುತ್ತಿದ್ದೇನೆ.

✒️ ಸುರಭಿ.ಎಸ್.
10ನೇ ತರಗತಿ,
ಸಾಂದೀಪನಿ ಪ್ರೌ ಡ ಶಾಲೆ,
ಶಿವಮೊಗ್ಗ.

Exit mobile version