Site icon TUNGATARANGA

Shimoga/ ಪಾಲಿಕೆ ಸದಸ್ಯರಿಗೆ ಜನ ಉಗಿದರೇಕೆ? ಉಗಿಯುತ್ತಿದ್ದಾರೇಕೆ? ನಿಮಗೆ ಗೊತ್ತಾ?

ಶಿವಮೊಗ್ಗ,ಮೇ.೦೬:
ಶಿವಮೊಗ್ಗ ನಗರಪಾಲಿಕೆಯಲ್ಲಿ ಕಂದಾಯ ಇಲಾಖೆ ಅವಾಂತರ, ಕುಡಿಯುವನೀರು, ಯುಜಿ ಕೇಬಲ್ ಅಳವಡಿಕೆ, ಸ್ಮಾರ್ಟ್‌ಸಿಟಿ ಅವಾಂತರ, ಒಳಚರಂಡಿ ಅವ್ಯವಸ್ಥೆ, ಬೀದಿ ದೀಪಗಳ ಅವ್ಯವಸ್ಥೆ ಸೇರಿದಂತೆ ಹತ್ತು ಹಲವು ಪ್ರಮುಖ ಬೇಡಿಕೆಗಳ ಬಗ್ಗೆ ಮಹಾನಗರಪಾಲಿಕೆ ಸದಸ್ಯರು ಪಕ್ಷಬೇಧ ಮರೆತು ಶಿವಮೊಗ್ಗ ನಾಗರೀಕರ ಬಗ್ಗೆ ಪ್ರಶ್ನಿಸುತ್ತಿದ್ದರೂ ನಗರ ಪಾಲಿಕೆ ಆಡಳಿತ ಗಪ್ ಚುಪ್ ಎನ್ನದೇ ಸುಮ್ಮನೇ ಕುಳಿತಿದ್ದ ಘಟನೆ ರೋಚಕವೆನಿಸಿತು. ಏಕೆಂದರೆ ನಾಳೆ ಅದೇ ಕಥೆ, ಅದೇ ಕರ್ಮ…, ಇಂದಿನ ಪಾಲಿಕೆಯ ಸಾಮಾನ್ಯ ಸಭೆಯ ದುರವಸ್ಥೆ ಇದು.


ಪಾಲಿಕೆ ಸದಸ್ಯರು ಜನರಿಂದ ಕ್ಯಾಕರಿಸಿ ಉಗಿಸಿಕೊಂಡು ನಿತ್ಯ ಕಾಲ ತಳ್ಳುವ ಪರಿಸ್ಥಿತಿ ಒಂದು ಕಡೆಯಾದರೆ, ಮತ್ತೊಂದು ಕಡೆ ಪರಿಹಾರ ಹುಡುಕುವ ಜಾಗದಲ್ಲಿ ಪ್ರಶ್ನೆಗಳು ನಕಾರಾತ್ಮ ಕವಾಗಿದ್ದವು. ಇಂದಿನಂತಹ ಬಹುತೇಕ ಎಲ್ಲಾ ಪಾಲಿಕೆ ಸಭೆ ಗಳನ್ನು ಜನ ನೋಡಿದ್ದರೆ ಅವರೇ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದರು. ಪರಿಹಾರ ಕಾಣದಿದ್ದರೂ ಎಲ್ಲಾ ಸದಸ್ಯರ ಮುಖದಲ್ಲಿ ಸಣ್ಣದೊಂದು ನಗು ಕಾಣುತ್ತಿತ್ತು. ಪ್ರೆಸ್ ಎಚ್ಚರವಾಗಿದ್ದಾಗಷ್ಟೇ ಪ್ರಶ್ನೆಗಳು ಹರಿದುಬಂದವೇ ಎಂಬ ಪ್ರಶ್ನೆ ಇಲ್ಲಿ ಕಾಡಿದ್ದಂತೂ ಸತ್ಯ. ಎಲ್ಲಿಗೆ ಬಂದಿದೆ ಆಡಳಿತ ವ್ಯವಸ್ಥೆ…?
ಸಭೆಯ ವಿವರ:
ಕುಡಿಯುವ ನೀರಿನ ಸಂಬಂಧಿಸಿದ ಕಾಮಗಾರಿಗಳು ನಿರ್ದಿಷ್ಟ ಸಮಯದಲ್ಲಿ ಆಗದೇ ಸಾರ್ವಜನಿಕರು ಪರದಾ ಡುತ್ತಿದ್ದು, ಕಾಮಗಾರಿ ವಿಳಂಬದ ಬಗ್ಗೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್ ಸುನಿತಾ ಅಣ್ಣಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯ ಪ್ರಾರಂಭದಲ್ಲೇ ವಿಪಕ್ಷ ಸದಸ್ಯರಾದ ರಮೇಶ್ ಹೆಗ್ಡೆ ಮತ್ತು ನಾಗರಾಜ್ ಕಂಕಾರಿ, ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾದ ಮೇಲೆ ಹಲವು ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಟೆಂಡರ್ ಆದ ಕಾಮಗಾರಿಗಳು ಕೂಡ ಸರಿಯಾಗಿ ನಡೆಯುತ್ತಿಲ್ಲ. ಪಾಲಿಕೆ ಸದಸ್ಯರನ್ನು ಜನ ಬಾಯಿಗೆ ಬಂದಂತೆ ಟೀಕಿಸುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ವಾರ್ಡ್ ಜನರಿಗೆ ಉತ್ತರ ಕೊಡುವುದೇ ಅಸಾಧ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಅನುಮೋದನೆಗೊಂಡಿರುವ ಕಾಮಗಾರಿ ವಿವರ ಸಂಬಂಧಪಟ್ಟ ಅಧಿಕಾರಿ ಸಭೆಗೆ ನೀಡುವಂತೆ ನಾಗರಾಜ್ ಕಂಕಾರಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ  ಕೋಲಾಹಲ ಉಂಟಾಗಿ ಮೇಯರ್ ಹಾಗೂ ಪಾಲಿಕೆ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಮಹಾತ್ಮ ಗಾಂಧಿ ಪಾರ್ಕ್ ಅಭಿವೃದ್ಧಿ ಕಾಮಗಾರಿ ಪ್ಯಾಕೇಜ್ ೧ ರಲ್ಲಿ ೩೦೦ ಲಕ್ಷ ರೂ., ಪ್ಯಾಕೇಜ್ ೨ ರಲ್ಲಿ ವಾರ್ಡ್‌ನಂ. ೩೦ ರ ಸೀಗೆಹಟ್ಟಿಯಲ್ಲಿ ವ್ಯಾಯಾಮಶಾಲೆ ಮತ್ತು ಲೈಬ್ರರಿ ಕಾಮಗಾರಿಗೆ ೫೫ ಲಕ್ಷ ರೂ., ಕೃಷಿ ಕಚೇರಿಯಲ್ಲಿರುವ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ೭೮ ಲಕ್ಷ ರೂ., ಮೆಸ್ಕಾಂ ಸಿ.ಎಸ್.ಡಿ. -೦೧ ವ್ಯಾಪ್ತಿಗೆ ಬರುವ ಯೂನಿಟ್ ೧ ಮತ್ತು ೩ ರಲ್ಲಿ ಬೀದಿ ದೀಪಗಳಿಗೆ ಸಂಬಂಧಿಸಿದಂತೆ ಮೂಲ ಸೌಕರ್ಯ ಸರಿಪಡಿಸುವ ಕುರಿತು ೪೦ ಲಕ್ಷ ರೂ., ಮೆಸ್ಕಾಂ ಸಿ.ಎಸ್.ಡಿ. ೦೨ ವ್ಯಾಪ್ತಿಗೆ ಬರುವ ವಾರ್ಡ್ ಗಳಲ್ಲಿ ಮೂಲ ಸೌಕರ್ಯಕ್ಕೆ ೨೦ ಲಕ್ಷ ರೂ., ಮೆಸ್ಕಾಂ ಸಿ.ಎಸ್.ಡಿ -೦೩ ವ್ಯಾಪ್ತಿಯ ವಾರ್ಡ್ ಗಳಲ್ಲಿ ಮೂಲ ಸೌಕರ್ಯ ಸರಿಪಡಿಸಲು ೨೨ ಲಕ್ಷ ರೂ. ಹೀಗೆ ಒಟ್ಟು ೫೧೫ ಲಕ್ಷ ರೂ. ಕಾಮಗಾರಿ ಅನುಮೋದ ನೆಗೊಂಡಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿವೆ. ಇನ್ನು ಉಳಿದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿ ರಮೇಶ್ ಮಾಹಿತಿ ನೀಡಿದರು.


ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಕಂದಾಯ ಇಲಾಖೆಯ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಬೆಲೆ ಬಾಳುವ ೧೨ ನಿವೇಶನಗಳನ್ನು ಅಕ್ರಮ ಖಾತೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಪಾಲಿಕೆ ಸದಸ್ಯರು ಬೆಳಕಿಗೆ ತಂದ ಮೇಲೆ ಖಾತೆ ಬ್ಲಾಕ್ ಮಾಡಲಾಗಿದೆ. ಕಂದಾಯ ಅಧಿಕಾರಿಗಳು ಯಾವುದೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪಾಲಿಕೆಗೆ ಅಲೆದು ಅಲೆದು ಹೈರಾಣಾಗಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಅನೇಕ ಸದಸ್ಯರು ಇದನ್ನು ಬೆಂಬಲಿಸಿ ಆಡಳಿತ ವೈಖರಿ ಟೀಕಿಸಿದರು. ಈ ಸಂದರ್ಭದಲ್ಲಿ ವಿಪಕ್ಷ ಸದಸ್ಯರು ಮೂರು ಜನ ಸ್ಥಾಯಿ ಸಮಿತಿ ಸದಸ್ಯರೇ ಆಡಳಿತ ವೈಖರಿ ಬಗ್ಗೆ ದಾಖಲೆ ಸಮೇತ ಟೀಕೆ ಮಾಡುತ್ತಿದ್ದಾರೆ ಎಂದರೆ ಪಾಲಿಕೆಯ ಆಡಳಿತ ವೈಫಲ್ಯವಲ್ಲವೇ ಎಂದು ಲೇವಡಿ ಮಾಡಿದರು.
ಸದಸ್ಯ ಆರ್.ಸಿ. ನಾಯ್ಕ್ ಮಾತನಾಡಿ, ಪಾಲಿಕೆ ನಿಜವಾದ ಸುಪ್ರೀಂ ಯಾರು ಎಂಬುದೇ ಗೊತ್ತಾಗುತ್ತಿಲ್ಲ. ?ಯುಕ್ತರು ಆದೇಶ ನೀಡಿದ್ದರೂ ಸಹ ಪಾಲಿಕೆ ಆಡ್ಮಿನ್ ಅಡ್ಡಗಾಲು ಹಾಕುತ್ತಿದ್ದಾರೆ. ಪಾಲಿಕೆ ವಕೀಲರು ಪಾಲಿಕೆ ಆಸ್ತಿ ಉಳಿಸಲು ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು.


ಹೊಸಮನೆ ಸದಸ್ಯೆ ರೇಖಾ ರಂಗನಾಥ್ ಮಾತನಾಡಿ, ರಾಜಕಾಲುವೆ ಹೂಳು ತೆಗೆಯು ವಂತೆ ಹಲವು ಬಾರಿ ಮನವಿ ಮಾಡಿದ್ದೇನೆ. ಈ ಕಾಮಗಾರಿಗೆ ಟೆಂಡರ್ ಕೂಡ ಆಗಿದೆ. ಜನವರಿ ಯಿಂದಲೇ ಈ ಬಗ್ಗೆ ಒತ್ತಾಯಿಸಿ ದ್ದೇನೆ. ಏಪ್ರಿಲ್ ಕಳೆದು ಇನ್ನೊಂದು ಮಳೆಗಾಲ ಆರಂಭ ವಾದರೂ ಶರಾವತಿ ನಗರ ಮತ್ತು ಹೊಸಮನೆಯ ರಾಜಕಾಲುವೆಯ ಹೂಳು ತೆಗೆಸಿಲ್ಲ. ಸಣ್ಣ ಮಳೆ ಬಂದರೂ  ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯ ಮುಖ್ಯ ಇಂಜಿನಿಯರ್ ಡಂಕಪ್ಪ ಮಾತನಾಡಿ, ಒಟ್ಟು ೧೩ ಪ್ಯಾಕೇಜ್ ಗೆ ಹೂಳು ತೆಗೆಯುವ ಟೆಂಡರ್ ಆಗಿದ್ದು, ೮ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಈ ತಿಂಗಳ ಅಂತ್ಯದೊಳಗೆ ಮುಗಿಸಲಾಗು ವುದು ಎಂದು ಸ್ಪಷ್ಟನೆ ನೀಡಿದರು.
ಎಂದಿನಂತೆ ಪ್ರಮುಖವಾಗಿ ಕುಡಿಯುವ ನೀರು, ಯುಜಿ ಕೇಬಲ್ ಅಳವಡಿಕೆ, ಸ್ಮಾರ್ಟ್ ಸಿಟಿ ಅವಾಂತರ, ಒಳಚರಂಡಿ ಅವ್ಯವಸ್ಥೆ, ಬೀದಿ ದೀಪಗಳ ಅವ್ಯವಸ್ಥೆ ಕುರಿತು ಸದಸ್ಯರು ಪಕ್ಷಬೇಧ ಮರೆತು ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸಭೆ ಮೂಂದುವರೆದಿತ್ತು ಹಾಗೂ ಬಹುತೇಕ ಸೈಲೆಂಟ್ ಆಗಿತ್ತು.
ಸಭೆಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪಮೇ ಯರ್ ಶಂಕರ್ ಗನ್ನಿ, ಆಯುಕ್ತ ಮಾಯಣ್ಣ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

Exit mobile version