Site icon TUNGATARANGA

ತೆರವಾದ ಗ್ರಾ.ಪಂ ಸ್ಥಾನಗಳಿಗೆ ಉಪಚುನಾವಣೆ

ಶಿವಮೊಗ್ಗ, ಮೇ.೦೫:
ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗ ಳಿಂದ ತೆರವಾಗಿರುವ ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣೆ ಪಟ್ಟಿಯನ್ನು ಈ ಕೆಳಕಂ ಡಂತೆ ಜಿಲ್ಲಾಧಿಕಾರಿಗಳಿಗಳು ಹೊರಡಿಸಿರುತ್ತಾರೆ.

ವೇಳಾಪಟ್ಟಿ : ಮೇ ೦೫ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ. ಮೇ ೧೦ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ. ಮೇ ೧೧ ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ. ಮೇ ೧೩ ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ. ಮೇ ೨೦ ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ(ಮತದಾನ ವೇಳೆ ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆವರೆಗೆ). ಮೇ೨೧ ಮರು ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸ ಬೇಕಾದ ದಿನಾಂಕ ಮತ್ತು ದಿನ(ಮತದಾನದ ವೇಳೆ ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆವರೆಗೆ). ಮೇ ೨೨ ಬೆಳಿಗ್ಗೆ ೮ ಗಂಟೆಯಿಂದ ತಾಲ್ಲೂಕು ಕೇಂದ್ರದಲ್ಲಿ ಮತಗಳ ಎಣಿಕೆ ದಿನಾಂಕ ಮತ್ತು ದಿನ ಹಾಗೂ ಮೇ ೨೨ ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸ ಬೇಕೋ ಆ ದಿನಾಂಕ ಮತ್ತು ದಿನ.


ಸ್ಥಾನಗಳ ವಿವರ : ಶಿವಮೊಗ್ಗ ತಾಲ್ಲೂಕಿನ ಬಾಳೆಕೊಪ್ಪ ಗ್ರಾಮ ಪಂಚಾಯ್ತಿಯ ೧-ಬಾಳೆಕೊಪ್ಪ ಕ್ಷೇತ್ರ, ಅನುಸೂಚಿತ ಪಂಗಡ ಮಹಿಳೆ. ಸಾಗರ ತಾಲ್ಲೂಕಿನ ಗೌತಮಪುರ ಗ್ರಾ.ಪಂ ಯ ಕಣ್ಣೂರು-೨, ಅನುಸೂಚಿತ ಪಂಗಡ ಮಹಿಳೆ. ಸೈದೂರು ಗ್ರಾ.ಪಂ ಯ ತಡಗಳಲೆ-೨, ಹಿಂದುಳಿದ ವರ್ಗ ‘ಬ’. ಹಾಗೂ ಶಿಕಾರಿಪುರ ತಾಲ್ಲೂಕಿನ ಗೊಗ್ಗ ಗ್ರಾ.ಪಂ ಯ ಗೊಗ್ಗ-೨, ಅನುಸೂಚಿತ ಪಂಗಡ, ಮಹಿಳೆ. ಬೇಗೂರು ಗ್ರಾ.ಪಂ ಯ ಬೇಗೂರು-೧, ಸಾಮಾನ್ಯ ಮಹಿಳೆ ತಲಾ ೦೧ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.


ಈ ಚುನಾವಣೆಯನ್ನು ಮತಪೆಟ್ಟಿಗೆಗಳ (ಬ್ಯಾಲಟ್ ಬಾಕ್ಸ್) ಮೂಲಕ ನಡೆಸಲಾಗುವುದು. ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಗ್ರಾ.ಪಂ ಚುನಾವಣೆಗಳ ಮತಪತ್ರದಲ್ಲಿ “ಓಔಖಿಂ” ಅವಕಾಶ ಇರುವುದಿಲ್ಲ. ಚುನಾವಣಾ ಕಾರ್ಯ ನಿರ್ವಹಿಸಲು ಚುನಾವಣಾಧಿಕಾರಿಗಳು, ಸಹಾ ಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.


ಮಾದರಿ ನೀತಿ ಸಂಹಿತೆ : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿ ಯಮ ೧೯೯೩ ರ ಪ್ರಕರಣ ೩೦೮ ಎಸಿ ರಂತೆ ಚುನಾ ವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಾಂಕ: ೦೫-೦೫-೨೦೨೨ ರಿಂದ ೨೨-೦೫-೨೦೨೨ ರವರೆಗೆ ಜಾರಿಯಲ್ಲಿರುತ್ತದೆ.
ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ, ಜಾರಿಯಲ್ಲಿರುವ ಪ್ರದೇಶಗಳಲ್ಲಿ ‘ಮತದಾನವು ಮುಕ್ತಾಯಗೊಳ್ಳುವ ನಲವತ್ತೆಂಟು ಗಂಟೆಗಳ ಮೊದಲಿನ ಅವಧಿಯಲ್ಲಿ’ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕ ಗಳನ್ನು ಅದರ ಮಾಲೀಕರು, ಅಧಿಬೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿದ ಅದರ ಕೀಯನ್ನು ತಾಲ್ಲೂಕು ತಹಶೀಲ್ದಾರ್ ಹಾಗೂ ಮ್ಯಾಜಿಸ್ಟ್ರೇಟ್‌ರವರಿಗೆ ಒಪ್ಪಿಸಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version