Site icon TUNGATARANGA

ಮೇ.6-8 : ಪುರುಷರ ಮತ್ತು ಮಹಿಳೆಯರ ಫುಟ್ ಬಾಲ್ ಪಂದ್ಯಾವಳಿ ಆಯೋಜನೆ

ಶಿವಮೊಗ್ಗ, ಮೇ.೦೫:
ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಹಾಗೂ ಜಿಲ್ಲಾ ಫುಟ್ ಬಾಲ್ ಸಂಸ್ಥೆ ಇವರ ಸಂಯುಕ್ತಾ ಶ್ರಯದಲ್ಲಿ ಮೇ ೬ ರಿಂದ ೮ ರವರೆಗೆ ನೆಹರೂ ಕ್ರೀಡಾಂಗ ಣದಲ್ಲಿ ‘ಪುನೀತ್ ರಾಜಕುಮಾರ್ ಕಪ್’ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಫುಟ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಕೆ. ಹರ್ಷ ಭೋವಿ ತಿಳಿಸಿದರು.


ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಂದ್ಯಾವಳಿಯಲ್ಲಿ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಗೋವಾ ರಾಜ್ಯದ ತಂಡಗಳು ಹಾಗೂ ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ತುಮಕೂರು, ಮಂಗಳೂರು, ಮಂಡ್ಯ, ಹಾಸನ ಸೇರಿದಂತೆ ಇತರೆ ಜಿಲ್ಲೆಯ ಪ್ರಸಿದ್ಧ ತಂಡಗಳು ಭಾಗವಹಿಸಲಿವೆ ಎಂದರು.


ಕ್ರೀಡಾಂಗಣದ ಎರಡು ಅಂಕಣಗಳಲ್ಲಿ ಪಂದ್ಯಗಳು ನಡೆಯಲಿದ್ದು, ೨೭ ಪುರುಷರ ತಂಡಗಳು ಹಾಗೂ ೬ ಮಹಿಳಾ ತಂಡಗಳು ಭಾಗವಹಿಸಲಿವೆ. ೧೭ ಪುರುಷರ ತಂಡಗಳು ಬೇರೆ ಬೇರೆ ರಾಜ್ಯಗಳಿಂದ ಭಾಗವಹಿಸುತ್ತಿವೆ. ಪುರುಷರ ತಂಡಕ್ಕೆ ಪ್ರಥಮ ಬಹುಮಾನ ೫೦ ಸಾವಿರ ರೂ., ದ್ವಿತೀಯ ೨೫ ಸಾವಿರ ರೂ. ಹಾಗೂ ಮಹಿಳೆಯರ ತಂಡಕ್ಕೆ ಪ್ರಥಮ ಬಹುಮಾನ ೧೫ ಸಾವಿರ ರೂ., ದ್ವಿತೀಯ ಬಹುಮಾನ ೧೦ ಸಾವಿರ ರೂ. ನಗದು ಬಹು ಮಾನ ಮತ್ತು ಪಾರಿತೋಷಕ ನೀಡಲಾಗುವುದು ಎಂದು ಅಭಿಮಾನಿ ಬಳಗದ ಖಜಾಂಚಿ ವಿಜಯಕುಮಾರ್ ತಿಳಿಸಿದರು.


ಟೈಗರ್ ಫೈರ್ಸ್ ಎಂಬ ಹೆಸರಿನಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಪ್ರತಿ ತಂಡದಿಂದ ೮ ಆಟಗಾ ರರಿದ್ದು, ಇವರಲ್ಲಿ ಐವರು ಮಾತ್ರ ಆಟವಾಡುತ್ತಾರೆ. ಪ್ರತಿ ಪಂದ್ಯ ೪೫ ನಿಮಿಷದ್ದಾಗಿದ್ದು, ಈ ಪಂದ್ಯಾವಳಿ ಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಿದ್ದು, ವಿಶೇಷವಾಗಿ ಪುನೀತ್ ರಾಜಕು ಮಾರ್ ಅವರ ಸ್ಮರಣಾರ್ಥ ಪ್ರತಿದಿನ ಸಂಜೆ ನೃತ್ಯ ರೂಪಕ ಮತ್ತು ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.


ಒಟ್ಟು ೪೦೦ ಕ್ಕೂ ಅಧಿಕ ಆಟಗಾರರು ಭಾಗವಹಿಸಲಿದ್ದು, ಇವರಿಗೆಲ್ಲಾ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ಒಟ್ಟು ೭ ಲಕ್ಷ ರೂ. ವೆಚ್ಚವಾಗಲಿದೆ. ಅಧಿಕೃತವಾಗಿ ಪಂದ್ಯಾವಳಿ ಉದ್ಘಾಟನೆ ಮೇ ೭ ರಂದು ಸಂಜೆ ೬ ಗಂಟೆಗೆ ನಡೆಯಲಿದ್ದು, ಚಲನಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ನೆರವೇರಿಸಲಿದ್ದಾರೆ. ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್, ಉದ್ಯಮಿ ವೀರೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿ ಸಲಿದ್ದು, ಮೇ ೮ ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಕೆ.ಇ. ಕಾಂತೇಶ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಶಶಿ, ಸುಸೈನಾದನ್, ಅರುಣ್ ಕುಮಾರ್ ಉಪಸ್ಥಿತರಿದ್ದರು.

Exit mobile version