ಶಿವಮೊಗ್ಗ, ಮೇ.೦೫:
ವೈವಿಧ್ಯಮಯ ಸಂಸ್ಕೃತಿಗಳನ್ನು ಹೊಂದಿ ಏಕತೆಯಿಂದ ಇರುವುದು ಭಾರತದ ಹಿರಿಮೆ. ವಿಶ್ವದಲ್ಲೇ ಅತೀ ಉತ್ಕೃಷ್ಟ, ವಿಶಿಷ್ಠ, ವಿಭಿನ್ನ, ವೈಭವ ಭರಿತ ಸಂಸ್ಕೃತಿ ನಮ್ಮೀ ದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ. ಭಾರತದ ಸಂಸ್ಕೃತಿ, ಪಾರಂಪರಿಕತೆ, ಭಾಷೆ, ಕಲೆ, ಸಾಹಿತ್ಯ ಆಹಾರ, ಉಡುಪು, ಪ್ರತಿಯೊಂದರಲ್ಲೂ ವೈವಿಧ್ಯತೆ ಇದ್ದರೂ ಭಾವ ಕೋಶದ ಏಕತೆ ನಮ್ಮೀ ದೇಶದ ಹಿರಿಮೆ. ಈ ಹಿರಿಮೆಯ ಮೂಲ ಸೆಲೆ ನಮ್ಮೀ ದೇಶದ ಮಹಿಳೆಯರು ಎಂದು ಲೇಖಕಿ ಶ್ರೀರಂಜಿನಿ ದತ್ತಾತ್ರಿ, ಮಾತನಾಡಿದರು
ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸದಸ್ಯಿನಿಯರಿಗಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ನೇತೃತ್ವ ವಹಿಸಿ ಭಾರತದ ಸಾಂಸ್ಕೃತಿಕ ವೈಭವದ ಮೂಲ ಸೆಲೆ ಭಾರ ತೀಯ ಮಹಿಳೆ ಎಂಬ ವಿಚಾರವಾಗಿ ಮುಖ್ಯ ಭಾಷಣ ಮಾಡಿದ ಶ್ರೀರಂಜಿನಿ ದತ್ತಾತ್ರಿಯವರು ನಮ್ಮೀ ದೇಶದಲ್ಲಿ ಪ್ರತೀ ಐದು ಕಿಲೋ ಮೀಟರ್‌ಗೂ ವೈವಿಧ್ಯಮ ಸಂಸ್ಕೃತಿಯನ್ನು ಕಾಣುತ್ತೇವೆ. ಪುರಾತನ ಸಂಸ್ಕೃತಿ, ವೇದ ಕಾಲದ ಸಂಸ್ಕೃತಿ, ವೈದಿಕ, ಶೈವ, ಭೌದ್ಧ, ಜೈನ, ಸಿಖ್ ಹೀಗೆ ಯಾವುದೇ ಧರ್ಮದ, ಪ್ರಾಂತದ ಸಂಸ್ಕೃತಿಕ ಇತಿಹಾಸ ವನ್ನು ಸಂಶೋಧಿಸುತ್ತಾ ಸಾಗಿದರೆ ಮಹಿ ಯರ ಕೊಡುಗೆ ಅಪಾರವಾಗಿ ಕಂಡುಬರುತ್ತದೆ.
ಮುಂದಿನ ದಿನಗಳಲ್ಲಿ ಈ ಕುರಿತು ಮತ್ತಷ್ಟು ಅಧ್ಯಯನಗಳು ನಡೆಯ ಬೇಕು ಎಂದರು. ಈ ದೇಶದ ಸಾಂಸ್ಕೃತಿಕ, ಧಾರ್ಮಿಕ, ಪಾರಂಪರಿಕತೆಗಳ ಜೊತೆಗೆ ಭಾಷೆ, ಕಲೆ, ಸಾಹಿತ್ಯ, ಆಹಾರ, ಉಡುಪು, ತೊಡಪು ಎಲ್ಲದರಲ್ಲೂ ಪ್ರಾಂತ ಪ್ರಾಂತಗ ಳಲ್ಲೂ
ವಿವಿಧತೆಯೊಂದಿಗೆ, ವೈವಿಧ್ಯತೆ ಯನ್ನೂ ಕಾಣುತ್ತೇವೆ. ಸಂಸ್ಕೃತಿಗಳ ಮಹಾ ಪ್ರವಾಹವೇ ನಮ್ಮ ದೇಶದಲ್ಲಿದೆ. ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸೀನಿಯರ್ ಛೇಂಬರ್ ಇಂಟರ್ ನ್ಯಾಷ ನಲ್ ಶಿವಮೊಗ್ಗದ ಅಧ್ಯಕ್ಷೆ ಶ್ರೀಮತಿ. ಪುಷ್ಪಾ ಎಸ್. ಶೆಟ್ಟಿಯವರು ಸಂಸ್ಕೃತಿ, ಸಂಸ್ಕಾರ ನಮ್ಮ ಪೂರ್ವಜರು ನಮಗೆ ನೀಡಿದ ಕೊಡುಗೆ. ಒಂದೊಂದು ರಾಜ್ಯದಲ್ಲೂ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಕಂಡು ಬರುತ್ತದೆ. ಈ ವೈಭವಗಳನ್ನು ಒಟ್ಟುಗೂಡಿಸಿದರೆ ಅದೆಷ್ಟು ಭವ್ಯ ನಮ್ಮೀ ದೇಶ ಎಂಬ ಹೆಮ್ಮೆ ನಮಗುಂಟಾಗುತ್ತದೆs ಎಂದು ಪುಷ್ಪ ಎಸ್. ಶೆಟ್ಟಿ ತಿಳಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ. ವಾಣಿರತ್ನಾಕರ್ ನೆರವೇರಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಸಂಪಿಗೆ ತಂಡದ ಉಷಾಕುಲಕರ್ಣಿ, ವಾಣಿ ರತ್ನಾಕರ್, ಶಶಿಕಲಾ, ಪುಷ್ಪಾ ಮಂಜಪ್ಪ, ಪುಷ್ಪಾವತಿ ಎಂ, ಮಮತಾರಾವ್, ಸುಧಾ ಮಹೇಶ್, ಸುಮಿತಾ ಮಂಜುನಾಥ್, ಸುಶ್ಮಾ ನಿರಂಜನ್ ನಿರ್ವಹಿಸಿದರು. ಆರಂಭವಾಯಿತು.