Site icon TUNGATARANGA

ಪಶುವೈದ್ಯಕೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಶಿವಮೊಗ್ಗ, ಮೇ.೦೧:
ಬೀದರ್‌ನ ನಂದಿನಗರದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ೧೨ನೇ ಘಟಿಕೋತ್ಸವದಲ್ಲಿ ಪಶುವೈದ್ಯಕೀಯ ಮಹಾವಿ ದ್ಯಾಲಯ, ಶಿವಮೊಗ್ಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದುಕೊಂಡು.
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊ ಗ್ಗವು ಪ್ರತಿಷ್ಠಿತ ಪಶುವೈದ್ಯಕೀಯ ಮಹಾವಿದ್ಯಾ ಲಯಗಳಲ್ಲಿ ಒಂದಾಗಿದೆ. ಪದವಿ ಮಟ್ಟದಲ್ಲಿ ಮಾತ್ರವ ಲ್ಲದೆ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಐಸಿಎಆರ್-ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯನ್ನು ಹೊಂದಿದ್ದಾರೆ. ಇದು ವೆಟರಿನರಿ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜಾಗಿದೆ.

ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊ ಗ್ಗದ ಡಾ. ಸತೀಶ್.ಜಿ.ಎಮ್., ಸಹಾಯಕ ಪ್ರಾಧ್ಯಾ ಪಕರು ಇವರು ಶೈಕ್ಷಣಿಕ ವರ್ಷ ೨೦೧೯-೨೦ ನೇ ಸಾಲಿನಲ್ಲಿ ಪ್ರಾಣಿ ಅನುವಂಶೀಯತೆ ಮತ್ತು ತಳಿಶಾಸ್ತ್ರ ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರಿಂದ ವಿಶ್ವವಿದ್ಯಾ ಲಯದ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.


ಬಿ.ವಿ.ಎಸ್‌ಸಿ. ಮತ್ತು ಎ.ಎಚ್ ಸ್ನಾತಕ ಪದವಿ: ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಕನಿಕ ಯಾದವ್ ಇವರಿಗೆ ೧೩, ಲಿಖಿತ ಬಿ.ಎನ್. ಇವರಿಗೆ ೦೨, ಉರ್ಮಿಳ, ಎಸ್. ಇವರಿಗೆ ೦೧, ರಜತ್ ಎಂ.ಎಸ್., ಇವರಿಗೆ ೦೬ ಚಿನ್ನದ ಪದಕ ಪ್ರದಾನ ಮಾಡಲಾಯಿತು.


ಎಂ.ವಿ.ಎಸ್‌ಸಿ. ಸ್ನಾತಕೋತ್ತರ ಪದವಿ: ಪಶುವೈ ದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ವಿಶ್ವನಾಥ ಯು., ಪ್ರಾಣಿ ಆಹಾರ ಶಾಸ್ತ್ರ ಇವರಿಗೆ ೦೧, ಪ್ರಶಾಂತ. ಎಮ್.ಕೆ. ಪಶುವೈದ್ಯಕೀಯ ಸೂಕ್ಷ್ಮಜೀವಾಣು ಶಾಸ್ತ್ರ ಇವರಿಗೆ ೦೨, ರೇವಣ ಸಿದ್ಧಪ್ಪ ಯಡವಾಡ್ ಪಶುವೈ ದ್ಯಕೀಯ ಔಷಧ ಮತ್ತು ವಿಷಶಾಸ್ತ್ರ ಇವರಿಗೆ ೦೨, ಮಹಮದ್ ಖಲೀಉಲ್ಲ ಪಶುವೈದ್ಯಕೀಯ ಜೀವರಸಾ ಯನಶಾಸ್ತ್ರ ಇವರಿಗೆ ೦೨, ಪವಿತ್ರ.ಬಿ.ಎಸ್. ಪಶುವೈದ್ಯ ಕೀಯ ಸೂಕ್ಷ್ಮಜೀವಾಣು ಶಾಸ್ತ್ರ ಇವರಿಗೆ ೦೩, ಮಣಿ ಕಂಠ.ಸಿ.ಎಲ್. ಪಶುವೈದ್ಯಕೀಯ ಔಷಧ ಮತ್ತು ವಿಷ ಶಾಸ್ತ್ರ ಇವರಿಗೆ ೦೨, ಯಲ್ಲಪ್ಪ.ಕೆ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ವಿಸ್ತರಣಾ ಶಿಕ್ಷಣ ಇವರಿಗೆ ೦೧, ಸುನೀಲ್ ಕುಮಾರ್.ಬಿ.ಎಸ್. ಪಶುವೈದ್ಯಕೀಯ ರೋಗಶಾಸ್ತ್ರ ಇವರಿಗೆ ೦೧ ಹಾಗೂ ಕಿರಣ್.ಹೆಚ್.ಜೆ. ಪಶುವೈದ್ಯಕೀಯ ರೋಗಶಾಸ್ತ್ರ ಇವರಿಗೆ ೦೧ ಚಿನ್ನದ ಪದಕ ಪ್ರದಾನ ಮಾಡಲಾಯಿತು.

Exit mobile version