ಬೆಂಗಳೂರು,ಏ.02:
ರಾಜ್ಯಾದ್ಯಂತ ಪವಿತ್ರ ರಂಜಾನ್ (ಈದ್ಉಲ್-ಫಿತರ್) ಹಬ್ಬವನ್ನು ನಾಳಿನ ಮಂಗಳವಾರ (ಮೇ 3) ರಂದು ಆಚರಿಸುವುದಾಗಿ ಕರ್ನಾಟಕ ರಾಜ್ಯ ವಕ್ಸ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸೌದಿ ತಿಳಿಸಿದ್ದಾರೆ.
ಇದನ್ನೂ ಓದಿ, ಬೆಂಗಳೂರಿನ ವ್ಯಕ್ತಿ ಶಿವಮೊಗ್ಗದ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದೇಕೆ…? https://tungataranga.com/?p=10538
ಇದನ್ನೂ ಓದಿ, ಶಿವಮೊಗ್ಗ | ಹೊಸನಗರ ಸಮೀಪ 20 ಅಡಿ ಕಂದಕಕ್ಕೆ ಬಿದ್ದ ಕಾರು https://tungataranga.com/?p=10536
ಭಾನುವಾರ ಚಂದ್ರ ದರ್ಶನವಾಗದ ಹಿನ್ನೆಲೆ ರಂಜಾನ್ ಹಬ್ಬವನ್ನು ಸೋಮವಾರ ಬದಲು ಮಂಗಳವಾರ ಆಚರಣೆ ಮಾಡಲಾಗುವುದು. ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ನಗರದಲ್ಲಿ ಚಂದ್ರನ ದರ್ಶನವಾಗಿಲ್ಲ ಮತ್ತು ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಚಂದ್ರನ ದರ್ಶನವಾಗಿಲ್ಲ. ಕೇರಳ, ಕರಾವಳಿಯಲ್ಲೂ ಚಂದ್ರ ದರ್ಶನ ಆಗದ ಹಿನ್ನೆಲೆ ಭಾರತದಾದ್ಯಂತ ಮಂಗಳಾರವೇ ಪವಿತ್ರ ರಂಜಾನ್ ಹಬ್ಬ ಆಚರಣೆ ಮಾಡಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಹಿಂದೆ ಮೂನ್ ಕಮಿಟಿ ಮಂಗಳವಾರದ ಬದಲು ಸೋಮವಾರವೇ ರಂಜಾನ್ ಹಬ್ಬ ಆಚರಣೆ ಮಾಡಲಾಗುವವುದು ಎಂದು ನಿರ್ಧಾರ ಕೈಗೊಳ್ಳಲಾಗಿತ್ತು.