Site icon TUNGATARANGA

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವಯೋಗಿ ಮೇ.2: ಬಸವಣ್ಣ ಜಯಂತಿ, ಉಚಿತ ಆರೋಗ್ಯ ತಪಾಸಣೆ

ಶಿವಮೊಗ್ಗ, ಏ.೩೦:
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕವು ಸೆಕ್ಯುರ್ ಆಸ್ಪತ್ರೆ ಇವರ ಸಹಯೋಗದೊಂದಿಗೆ ವಿಶ್ವಗುರು ಬಸವಣ ನವರ ಜಯಂತಿಯ ಅಂಗವಾಗಿ ಮೇ೨ರ ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ಗಂಟೆಯವರೆಗೆ ವಿನೋಬನಗರದ ಮುಖ್ಯ ರಸ್ತೆಯಲ್ಲಿರುವ ಶಿವಾಲಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಯುವ ಘಟಕದ ಜಿಲ್ಲಾಧ್ಯಕ್ಷ ಶಿವಯೋಗಿ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಸವಣ್ಣನವರ ವಿಚಾರದಿಂದ ಪ್ರೇರಿತಗೊಂಡ ಹಾನಗಲ್‌ನ ಶ್ರೀ ಮ.ನಿ.ಪ್ರ. ಕುಮಾರ ಮಹಾ ಶಿವಯೋಗಿಗಳು ಅಖಿಲ ಭಾರತ ವೀರಶೈವ ಮಹಾಸಭಾ ವನ್ನು ೧೯೦೪ರಲ್ಲಿ ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗು ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಹಾಸಭಾ ಮಾಡುತ್ತ ಬಂದಿದೆ ಹಾಗೂ ವಿವಿಧ ಘಟಕಗಳನ್ನು ಹೊಂದಿದೆ ಎಂದರು.


ಸಾಮರಸ್ಯ, ಭ್ರಾತೃತ್ವ, ಆರೋಗ್ಯ ವೃದ್ಧಿಸಿಕೊಳ್ಳಲು ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದು, ಈ ಶಿಬಿರದಲ್ಲಿ ಸೆಕ್ಯುರ್ ಆಸ್ಪತ್ರೆಯ ಫಿಜಿಷಿಯನ್ ಡಾ. ಸೌರಬ್ ಸಿ.ಹಿರೇಮಠ್, ಶ್ವಾಸಕೋಶ ತಜ್ಞ ಡಾ.ಅಭಿಷೇಕ್ ನುಚ್ಚಿನ್, ಮೂಳೆ ಮತ್ತು ಕೀಲು ತಜ್ಞ ಡಾ.ಬಿ.ಸುರೇಶ್, ಮೂತ್ರಪಿಂಡ ತಜ್ಞ ಡಾ. ಕೆ.ಆರ್.ಹರೀಶ್, ಮಕ್ಕಳ ತಜ್ಞ ಡಾ. ವಿನಾಯಕ್ ಪಿ.ಹೆಗಡೆ, ಸ್ತ್ರೀ ರೋಗ ತಜ್ಞರಾದ ಡಾ.ಕೆ.ಎಸ್.ಅಪರ್ಣ ಭಾಗವಹಿಸಿ ತಪಾಸಣೆ ಹಾಗೂ ಸಲಹೆಗಳನ್ನು ನೀಡಲಿದ್ದಾರೆ ಎಂದರು.


ನಗರದ ಸಾರ್ವಜನಿಕರು ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಉಮಾ ಶಂಕರ್, ನಿತೀಶ್‌ಕುಮಾರ್, ಉಮೇಶ್ ಕತ್ತಿ, ಶಿವಕುಮಾರ್, ಅಭಿಷೇಕ್, ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಸಿ.ಮಹೇಶ್‌ಕುಮಾರ್ ಉಪಸ್ಥಿತರಿದ್ದರು.

Exit mobile version