Site icon TUNGATARANGA

ಶಿವಮೊಗ್ಗ/ ಪ್ರೇಮವಿವಾಹಕ್ಕೆ ಮಗುವಿನ ಕೊಡುಗೆ: ಮತ್ತೆ ಅಡ್ಡಿಯಾದ ಜಾತಿ “ಸಂಬಂಧ” ಕಳಚಿತೇ?

ಶಿವಮೊಗ್ಗ, ಏ.29:
ಪ್ರೇಮ ವಿವಾಹ ಕರುಳ ಕುಡಿಯನ್ನು ನೀಡಿತು. ಇಲ್ಲಿ ಮೊದಲಿನಿಂದಲೂ ನಿಗೂಢವಾಗಿ ಆಕ್ರೋಶಕ್ಕೆ ಕಾರಣವಾಗಿದ್ದ ಜಾತಿ ಎಂಬ ವಿಕೃತತೆಗೆ ಈಗ ಸಂಬಂಧವನ್ನು ಕಳಚುವ ಯತ್ನ ಮಾಡಿತೇ? ಪ್ರೀತಿಸಿ ಮದುವೆಯಾಗಿ ಮನೆಯವರ ಹಿರಿಯರ ಆಶೀರ್ವಾದ ಪಡೆಯಲು ಸಾಧ್ಯವಾಗದ ಹಿನ್ನೆಲೆಯ ಕಾರಣ ಇಂತಹದೊಂದು ಜಗಳಕ್ಕೆ ದಾರಿಮಾಡಿಕೊಟ್ಟಿದೆ.


ಭದ್ರಾವತಿಯ ಮೈದೊಳಲಿನ ನಿವಾಸಿಯಾಗಿರುವ ರಾಧ(26) ಅದೇ ಗ್ರಾಮದ ಗಿರೀಶ್(35) ಎಂಬುವರೊಂದಿಗೆ ಪ್ರೀತಿಯಾಗಿರುತ್ತದೆ. ಮೊದಲೇ ಯುವತಿ ರಾಧ ನಿಮ್ಮ ಜಾತಿ ಬೇರೆ ಮತ್ತು ನಮ್ಮ ಜಾತಿ ಬೇರೆ ಇಲ್ಲಿಗೆ ನಿಲ್ಲಿಸುವಂತೆ ಗಿರೀಶ್ ಗೆ ತಾಕೀತು ಮಾಡಿದ್ದಾಳೆ.
ನಾನು ಮನೆಯಲ್ಲಿ ಈ ಪ್ರೀತಿಯನ್ನ ಒಪ್ಪಿಸುವೆ. ನೀನು ಹಿಂಜರಿಯ ಬೇಡ ಎಂದು ಒಪ್ಪಿಸಿದ ಯುವಕ ಗಿರೀಶ್ ಎಂಸಿ ಹಳ್ಳಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಾಧಳನ್ನು ಮದುವೆಯಾಗುತ್ತಾನೆ. ಒಂದು ಗಂಡು ಮಗುವಾಗಿದ್ದು 2018 ರಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗಂಡ ಹೆಂಡತಿ ಎಂದು ಮದುವೆಯಾಗುತ್ತಾರೆ.
ಆದರೆ ಗಿರೀಶ್ ಮನೆಯಲ್ಲಿ ಈ ಮದುವೆಯನ್ನ ಒಪ್ಪದ ಗಿರಿ ಮನೆಯವರು ಆಶ್ರಯ ಕೇಳಿಬಂದ ರಾಧೆಯನ್ನ ಸೊಸೆಯೆಂದು ಒಪ್ಪಲಿಲ್ಲ. ನೀನು ಉನ್ಬತ ಜಾತಿಯವನು ಇತರೆ ಜಾತಿಯವರ ಜೊತೆ ಯಾಕೆ ಮಾದುವೆ ಮಾಡಿಕೊಂಡಿರುವೆ ಎಂದು ಗಿರಿ ಮನೆಯವರು ಆತನ ಮಂಕುಬೂದಿ ಎರಚಿ ರಾಧಾರನ್ನು ತಿರಸ್ಕರಿಸುವಂತೆ ಮಾಡಿದ್ದಾರೆ.
ಪತಿಯನ್ನ ಅರಿಸಿ ಬಂದ ರಾಧಾಳಿಗೆ ಗಿರಿಮನೆಯವರು ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿರುವುದಾಗಿ ಆಕೆ ಆರೋಪಿಸಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Exit mobile version