Site icon TUNGATARANGA

ಪಾರಿವಾಳಗಳ ಗೂಡಿಗೆ ನುಗ್ಗಿದ ‘ನಾಗರಾಜ’ನಿಗೆ ಭಕ್ಷ್ಯ ಭೋಜನ ಎಲ್ಲಿ ಗೊತ್ತಾ?

ಶಿವಮೊಗ್ಗ, ಏ.25:
ಸುಮಾರು ಏಳೆಂಟು ಅಡಿ ಉದ್ದದ ನಾಗರಹಾವಿಗೆ ಇಲ್ಲಿನ ಪಾರಿವಾಳದ ಗೂಡೇ ಭಕ್ಷ್ಯ ಬೋಜನದ ಆಸರೆಯಾಗಿತ್ತು. ಎರಡ್ಮೂರು ದಿನದಲ್ಲಿ ಅಷ್ಟೇ ಸಂಖ್ಯೆಯ ಪಾರಿವಾಳಗಳು ನಾಗರಾಜ ಹಸಿವಿನ ಅಳಲಿಗೆ ಆಸರೆಯಾಗಿವೆ
ವಿಷಯ ಹೀಗಿದೆ ನೋಡಿ


ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮದ ಮನೆಯೊಂದರ ಆವರಣದಲ್ಲಿನ ಪಾರಿವಾಳ ಸಾಕಾಣಿಕೆ ಮಾಡಿದ್ದ ಗೂಡಿಗೆ ನುಗ್ಗಿದ ನಾಗರಹಾವೊಂದು, ಸುಮಾರು ನಾಲ್ಕರಿಂದ ಐದು ಪಾರಿವಾಳಗಳನ್ನು ಭಕ್ಷಿಸಿದ ಘಟನೆ ನಡೆದಿದೆ.
ಪಾರಿವಾಳ ಗೂಡಿನಲ್ಲಿದ್ದ ಹಾವನ್ನು ಗಮನಿಸಿದ ಕುಟುಂಬದವರು ಗಮನಿಸಿ ತಕ್ಷಣವೇ ಉರಗ ಸಂರಕ್ಷಕ ಸ್ನೇಕ್ ಕಿರಣ್ ಮಾಹಿತಿ ರವಾನಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಿರಣ್ ಕೆಲ ನಿಮಿಷಗಳಲ್ಲಿ ಗೂಡಿನಲ್ಲಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸಂರಕ್ಷಿಸುವಲ್ಲಿ ಸಫಲರಾಗಿದ್ದಾರೆ.
ನಾಗರಾಜನ ಉಪಟಳದಲ್ಲಿ ಜೀವ ಹಿಡಿದಿಟ್ಟುಕೊಂಡಿದ್ದ ಪಾರಿವಾಳಗಳು ನಿರುಮ್ಮಳಗೊಂಡಿವೆ. ಅಲ್ಲಿನ ಜನತೆ ಸ್ನೇಕ್ ಕಿರಣ್ ರಿಗೆ ಅಭಿನಂಧಿಸಿದ್ದಾರೆ.
ಚಿತ್ರ ಕೃಪೆ – ರೇಣುಕೇಶ್

Exit mobile version