Site icon TUNGATARANGA

ಶಿವಮೊಗ್ಗ ಸ್ಮಾರ್ಟ್‌ಸಿಟಿ ಕಾಮಗಾರಿಯ ಸಮಗ್ರ ಪರಿಶೀಲನೆ: ಮುಖ್ಯಮಂತ್ರಿ ಬೊಮ್ಮಾಯಿ

ಶಿವಮೊಗ್ಗ: ಬೆಂಗಳೂರನ್ನು ಹೊರತುಪಡಿಸಿದರೆ ಶಿವಮೊಗ್ಗ ಜಿಲ್ಲೆಯೂ ಸಹ ಕೈಗಾರಿಕೋದ್ಯಮಗಳನ್ನು ಆರಂಭಿಸಲು ಸೂಕ್ತ ವ್ಯವಸ್ಥೆಗಳನ್ನು ಹೊಂದಿರುವಂತಹ ಜಿಲ್ಲೆ ವಿಮಾನ ನಿಲ್ದಾಣ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದು, ಅದನ್ನು ಹಾಗೂ ಆದಷ್ಟು ಬೇಗನೆ ಮುಗಿಸಲು ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.


ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶಿವಮೊಗ್ಗದಲ್ಲಿ ಈಗಾಗಲೇ ಕೈಗಾರಿಕೆಗಳನ್ನು ಆರಂಭಿಸಲು ಸೂಕ್ತವಾದಂತಹ ಸ್ಥಳ ಸಿದ್ದವಾಗಿದೆ ಅಲ್ಲಿಗೆ ಉದ್ಯಮಗಳನ್ನು ಕರೆತರುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.


ಶಿವಮೊಗ್ಗ ಸ್ಮಾರ್ಟ್‌ಸಿಟಿ ಹಾಗೂ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸುತ್ತೇನೆ ಎಂದು ಹೇಳಿದಾಗ ಪತ್ರಕರ್ತರು ಸ್ಮಾರ್ಟ್‌ಸಿಟಿ ಕಾಮಗಾರಿಯ ಲೋಪಗಳ ಬಗ್ಗೆ ಆಕ್ಷೇಪಿಸಿದಾಗ ಕೂಡಲೇ ನಗರದ ಸ್ಮಾರ್ಟ್‌ಸಿಟಿಯ ಸಮಗ್ರ ಕಾಮಗಾರಿಗಳ ವಿಡಿಯೊ ಚಿತ್ರಕರಣವನ್ನು ತರಿಸಿಕೊಂಡು ಕ್ರಮಕೈಗೊಳ್ಳಲಾಗತ್ತದೆ ಎಂದರು.
ಮುಖ್ಯಮಂತ್ರಿಗಳು ವಿಶೇಷವಾಗಿ ಮಲೆನಾಡು ಭಾಗದ ಅರಣ್ಯ ಭೂಮಿ ಸಮಸ್ಯೆಗೆ ಮೇ ಮೊದಲವಾರ ರಾಜ್ಯಮಟ್ಟದಲ್ಲಿ ಸಂಬಂಧಪಟ್ಟ ಜಿಲ್ಲೆಗಳ ಪ್ರಮುಖರ ಹಾಗೂ ಅಧಿಕಾರಿಗಳ ಸಭೆ ಕರೆಯುತ್ತೇನೆ ಇದಕ್ಕೆ ಶಾಶ್ವತ ಪರಿಹಾರ ಹುಡುಕಲಾಗುತ್ತದೆ ಎಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಸಚಿವ ಆರಗ ಜ್ಞಾನೇಂದ್ರ, ಶಾಸಕ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾದ್ಯಕ್ಷ ಮೇಘರಾಜ್ ಹಾಗೂ ಇತರರಿದ್ದರು.


Exit mobile version