ಶಿವಮೊಗ್ಗ, ಏ.೧೯:
ಕೆಲವು ಮನುಷ್ಯರು ಎಷ್ಟೋ ಕಡೆ ವಿಕೃತ ನಾಗಿ ಬಿಡುತ್ತಾನೆ. ದೈಹಿಕ ವಾಂಚೆಗಳನ್ನು ಹಿಡಿತ ದಲ್ಲಿ ಇಟ್ಟುಕೊಳ್ಳಲಾಗದವ ಹೇಗೆ ಸಮಾಜದ ನಿಕೃಷ್ಟತೆಗೆ ತಾತ್ಸಾರಕ್ಕೆ ಒಳಗಾಗುತ್ತಾನೆ ಎಂಬುದಕ್ಕೆ ಸಾಕ್ಷಿಯಾಗಿ ಘಟನೆಯೊಂದು ನಡೆದಿದೆ.
ರಾತ್ರಿ ವೇಳೆ ಒಂಟಿ ಮಹಿಳೆಯರಿದ್ದ ಮನೆಗ ಳಿಗೆ ನುಗ್ಗಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತಿದ್ದ ಮನೋಭಾವದ ಆರೋಪ ಹೊಂದಿದ್ದ ಯುವಕನನ್ನು ಸಾರ್ವಜನಿಕರೇ ಹಿಡಿದು ನಾಕು ಚಂದದ ಗೂಸಾ ಕೊಟ್ಟು ಪೊಲೀ ಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿ ಶಿವಮೊಗ್ಗ ತಾಲೂಕು ಆಯನೂರಿನ ಕೋಟೆ ತಾಂಡದಲ್ಲಿ ಗ್ರಾಮದ ಜನರೇ ಯುವಕನನ್ನು ಹಿಡಿದು ಕೈಕಾಲು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ ಕೋಟೆ ತಾಂಡದ ಬಂಧಿತ ಆರೋಪಿಯಾಗಿದ್ದಾನೆ.
ತಾಂಡದ ಮಹಿಳೆಯೋರ್ವರ ಪತಿ ನಾಲ್ಕು ದಿನದಿಂದ ಮನೆಯಲ್ಲಿಲ್ಲದಿರುವುದನ್ನು ಗಮನಿಸಿದ್ದ ಈತ ನಿನ್ನೆ ರಾತ್ರಿ ಆ ಮನೆಗೆ ನುಗ್ಗಿದ್ದಾನೆ. ಮಹಿಳೆಯ ಮನೆಗೆ ನುಗ್ಗಿದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ನಿದ್ರೆಯಿಂದ ಎಚ್ಚರಗೊಂಡ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ.ಈ ವೇಳೆ ಪಕ್ಕದ ಕೋಣೆಯಲ್ಲಿದ್ದ ಮಲಗಿದ್ದ ಮಹಿಳೆಯ ಮಾವ ಎಚ್ಚರಗೊಂಡು ಸೊಸೆಯ ಕೋಣೆಗೆ ಹೋಗಿದ್ದಾನೆ. ಈ ವೇಳೆ ಸುಂದರ್ ನಾಯ್ಕ ಅಲ್ಲಿಂದ ಪರಾರಿಯಾಗಿದ್ದಾನೆ.
ಇಂದು ಬೆಳಗ್ಗೆ ವಿಷಯ ತಿಳಿದು ಗ್ರಾಮಸ್ಥರು ಸೆರೆ ಹಿಡಿದು ದೇವಸ್ಥಾನದ ಬಳಿ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕುಂಸಿ ಪೊಲೀಸರು ಸುಂದರ್ ನಾಯ್ಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆಯೂ ಇದೇ ರೀತಿಯ ಹಲವು ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ ಎನ್ನಲಾಗಿದೆ. ಆದರೆ ಮರ್ಯಾದೆಗೆ ಅಂಜಿ ಯಾರೂ ಪ್ರಕರಣ ದಾಖಲಿಸಿರಲಿಲ್ಲ ಎಂಬ ಧೈರ್ಯದ ಮೇಲೆ ತಮ್ಮ ಹಳೇ ಚಾಳಿಯನ್ನ ಮುಂದುವರೆಸಿದ್ದ. ಕುಂಸಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.