Site icon TUNGATARANGA

ತಲೆಬುಡವಿಲ್ಲದ ಮಾಹಿತಿ; ಎಂದಿನಂತೆ ಕೊರೊನಾ ರಣಕೇಕೆ!

ಶಿವಮೊಗ್ಗ, ಆ.11:
ಇದ್ಯಾವ ಸೀಮೆ ಮಾಹಿತಿ ನೀಡಿಕೆಯೂ ಅರ್ಥ ಆಗುತ್ತಿಲ್ಲ. ಒಂದಕ್ಕೊಂದು ಅರ್ಥವಿಲ್ಲದಂತೆ ರಾಜ್ಯ ಹಾಗೂ ಜಿಲ್ಲಾ ಇಲಾಖೆಗಳ ಕೊವಿಡ್ 19 ವರದಿ ಬರುತ್ತಿದೆ.
ನಿತ್ಯದ ಕೊರೊನಾ ವರದಿಗಳು ಇಲ್ಲಿ ಒಂದಕ್ಕೊಂದು ಸಂಬಂಧವಿಲ್ಲ.
ನಿನ್ನೆ ಶಿವಮೊಗ್ಗ ಜಿಲ್ಲಾ ವರದಿಯಲ್ಲಿ 210 ದಾಖಲಾಗಿದ್ದರೆ ಇಂದು 77 ಎಂದು ದಾಖಲಾಗಿದೆ. ಇದೆ ರಾಜ್ಯದಲ್ಲಿ ನಿನ್ನೆ ಶೂನ್ಯ ದಾಖಲಾಗಿದ್ದರೆ ಇಂದು 189 ಎಂದು ದಾಖಲಾಗಿದೆ.
ಇಂದಿನ ಎರಡು ಪ್ರತಿಗಳನ್ನು ಓದುಗ ದೊರೆಗಳಾ ತಮಗೆ ನೀಡುವ ಜವಾಬ್ದಾರಿ ಅಷ್ಟೇ ನಮ್ಮದಾಗಿದೆ.
ಈ ಎರಡೂ ವರದಿಗಳನ್ನು ಗಮನಿಸಿ.‌ಒಂದಕ್ಕೊಂದು ಸಂಬಂಧವಿಲ್ಲ. ಸಾವಿನ ಸಂಖ್ಯೆ ವ್ಯತ್ಯಾಸವಿದೆ ದಾಖಲಾತಿ ಸಂಖ್ಯೆ ನೂರಕ್ಕೂ ಹೆಚ್ಚು ಕಡಿಮೆ ಇದೆ. ನಮ್ಮ ತಾಂತ್ರಿಕ ತೊಂದರೆ ಎಂದು ಪುಕ್ಕಟ್ಟೆ ಕಾರಣ ಹೇಳುತ್ತಾ ಇದೇ ವಿಷಯವನ್ನು ಹೇಳುವ ಇಲಾಖೆ ಅಧಿಕಾರಿಗಳ ಸಿಬ್ಬಂದಿಗಳ ಕಾರ್ಯ ಏನು ಎಂಬುದು ಇಂದಿನ ಪ್ರಶ್ನೆ.
ಪ್ರಿ ಪೇಷೆಂಟ್ ಹೆಸರಲ್ಲಿ ಲಕ್ಷಗಟ್ಟಲೆ ಹಣ ವಸೂಲಾತಿ ವ್ಯವಹಾರವೇ.,? ಅನುಮಾನ ಜನರದು. ಪೇಷೆಂಟ್ ಅಗಿರುವವರದು. ಖಾಸಗಿ ಆಸ್ಪತ್ರೆಯಲ್ಲಿ ಇದ್ದು ಲಕ್ಷಗಟ್ಟಲೇ ಕಕ್ಕಿರುವವರದು.
ಹುಡುಕಾಟ ಅಷ್ಟೆ ನಮ್ದು


ಜಿಲ್ಲಾ ವರದಿ
ಶಿವಮೊಗ್ಗ, ಆ.11:

ಶಿವಮೊಗ್ಗ ಕೋವಿಡ್ ಚೆಕ್ ಮಾಡಿಸಿಕೊಂಡ 344 ಜನರಿಗೆ ನೆಗಿಟೀವ್ ಬಂದಿದ್ದು ಉಳಿದವರಿಗೆ ಪಾಸೀಟೀವ್ ಬಂದಿದೆ. 77 ಜನರಿಗೆ ಪಾಸಿಟೀವ್ ಬಂದಿದೆ. ಅದರಲ್ಲೂ ಶಿವಮೊಗ್ಗ ನಗರ ಸಂಪೂರ್ಣಮಯವಾಗ ಹೊರಟಿದೆ.
ಇಂದು ಕೊರೊನಾ ಪರೀಕ್ಷೆ ಮಾಡಿಸಿಕೊಂಡ 816 ಜನರಲ್ಲಿ 77 ಜನರಿಗೆ ಪಾಸಿಟೀವ್ ಬಂದಿರುವುದು ಭಯದ ವಾತಾವರಣ ಮೂಡಿಸಿದೆ.
ಶಿವಮೊಗ್ಗ ಜಿಲ್ಲೆಯ ಕೊರೊನಾ ಸಾವಿನ ಕಂಟಕಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಸಹ ಮತ್ತೆ ಓರ್ವರು ಸಾವು ಕಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ನಿಧನ ಹೊಂದಿದವರ ಸಂಖ್ಯೆ 63 ಬಂದಿರುವುದು ಆತಂಕದ ಸಂಗತಿ.
ಇಂದಿನ ಈ ಜಿಲ್ಲಾ ವರದಿಯಲ್ಲಿ ಶಿವಮೊಗ ಜಿಲ್ಲೆಯಲ್ಲಿ 77 ಜನರಿಗೆ ಸೊಂಕು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯ ವರದಿಯಲ್ಲಿ ಇಂದಿನ ಸಂಖ್ಯೆ ಎಂದಿನಂತೆ ವ್ಯತ್ಯಾಸವಾಗಿದೆ.
ಇದು ಜನಸಾಮಾನ್ಯರಿಗಿಂತ ಹೆಚ್ಚು ಅನ್ಯರಿಗೆ ಅಂದರೆ ಇತರೆ ಕಾಯಿಲೆ ಹೊಂದಿದವರು, ಸ್ಥಿತಿವಂತರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ನೌಕರರನ್ನೆ ಕಾಡುತ್ತಿದೆ. ಇದು ನಮ್ಮ ಇಂದಿನ ವ್ಯವಸ್ಥೆಯ ಬುಡಗಳಿಗೆ ಟಾರ್ಗೇಟ್ ಮಾಡುತ್ತಿರುವುದು ಆತಂಕಕಾರಿ.
ಇಂದು ಸಂಜೆ ಹೊರಬಿದ್ದ ಶಿವಮೊಗ್ಗ ಕೋವಿಡ್-19 ವರದಿಯಲ್ಲಿ 344 ನೆಗಿಟೀವ್ ಇದ್ದರೆ 77 ಪಾಸಿಟಿವ್ ಬಂದಿದೆ.
ಭಯ ಬರಲು ಕಾರಣ ಎಲ್ಲೆಡೆ ಕೊರೊನಾ ಕಂಟಕ ಕಾಣುತ್ತಿರುವುದು ಎನ್ನಲಾಗಿದೆ.
ಇವತ್ತು 178 ಜನ ಡಿಸ್ಚಾರ್ಜ್ ಆಗಿದ್ದರೂ ಸಹ 3134 ಸೋಂಕಿತರಲ್ಲಿ 2005 ಜನ ಗುಣಮುಖರಾಗಿದ್ದಾರೆ.
ಇಂದಿನ ಈ ವರದಿಯಲ್ಲಿ ಇಂದೂ ಶಿವಮೊಗ್ಗದಲ್ಲಿ ರಾಕ್ಷಸ ಕಳೆಯೆಂಬಂತೆ 35, ಶಿಕಾರಿಪುರದಲ್ಲಿ 11, ಭದ್ರಾವತಿಯಲ್ಲಿಯೂ 11, ಸಾಗರದಲ್ಲಿ 02, ಹೊಸನಗರ 09, ತೀರ್ಥಹಳ್ಳಿಯಲ್ಲಿ 04 ಹೊಸನಗರದಲ್ಲಿ 12, ಸೊರಬ 01 ಪ್ರಕರಣಗಳು ಪತ್ತೆಯಾಗಿವೆ. ಹೊರಜಿಲ್ಲೆಯ 01 ಪ್ರಕರಣಗಳು ಪತ್ತೆಯಾಗಿವೆ.
ಇಂದಿನವರೆಗೆ ಸಾವು ಕಂಡವರ ಸಂಖ್ಯೆ 63 ಆಗಿದ್ದು, ಅದರ ಸಂಖ್ಯೆ ಹೆಚ್ಚಾಗುತ್ತಿದೆ
ದಿನೇ ದಿನೇ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ.
ನಮ್ಮ ಜಾಗೃತೆ ಮಾತ್ರ ನಮ್ದಾಗಿದೆ. ಯಾರನ್ನೂ ನಂಬುವಂತಿಲ್ಲ. ಸರ್ಕಾರದ ಆಸರೆ ಹಣದ ಜೊತೆಗಿರುವಂತಿದೆ.

Exit mobile version