Site icon TUNGATARANGA

ಗುತ್ತಿಗೆದಾರ ಸಂತೋಷ್ ಕುಟುಂಬಕ್ಕೆ ಶಿವಮೊಗ್ಗ ವೀರಶೈವರಿಂದ ನೆರವು, ಜಾತ್ಯಾತೀತವಾಗಿ ದೇಣಿಗೆ ಸಂಗ್ರಹ


ಶಿವಮೊಗ್ಗ,ಏ.17:
ಇತ್ತೀಚೆಗೆ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವೀರಶೈವ ಸಮಾಜದ ಸಂತೋಷ್ ಪಾಟೀಲ್ ಅವರ ಕುಟುಂಬಕ್ಕೆ ಶಿವಮೊಗ್ಗ ಜಿಲ್ಲಾ ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ನೆರವು ನೀಡಲಾಗುವುದು ಎಂದು ಸಮಾಜದ ಮುಖಂಡರು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡರಾದ ಎಸ್.ಪಿ. ದಿನೇಶ್, ಹೆಚ್.ಎಲ್ ಷಡಾಕ್ಷರಿ, ಹೆಚ್.ಸಿ.ಯೋಗೀಶ್, ಏಪ್ರಿಲ್ ೨೩ರಂದು ಮೃತ ಸಂತೋಷ್ ಪಾಟೀಲ್ ಅವರ ಕುಟುಂಬಕ್ಕೆ ಸಮಾಜದಿಂದ ಸಂಗ್ರಹಿಸಲಾದ ಹಣವನ್ನು ನೀಡಲಾಗುವುದು ಎಂದರು.
ಎಸ್.ಪಿ. ದಿನೇಶ್ ಮಾತನಾಡಿ, ವೀರಶೈವ ಸಮಾ ಜದ ಮುಖಂಡರು ಇತ್ತೀಚೆಗೆ ಸಭೆ ನಡೆಸಿ, ಸಂತೋಷ್ ಪಾಟೀಲ್ ಕುಟುಂಬಕ್ಕೆ ಸಹಾಯ ಮಾಡುವ ನಿರ್ಧಾ ರವನ್ನು ತೆಗೆದುಕೊಳ್ಳಾಗಿದೆ. ಮೊದಲ ಸಭೆಯಲ್ಲಿಯೇ ಸುಮಾರು ೨.೫ ಲಕ್ಷ ರೂ. ಸಂಗ್ರಹವಾಗಿದೆ. ಈ ಹಣ ಮತ್ತು ಮುಂದೆ ಸಹಾಯ ಮಾಡಲಿರುವ ದೇಣಿಗೆಯನ್ನು ಸೇರಿಸಿ ಏ.೨೩ರಂದು ಅವರ ಕುಟುಂಬಕ್ಕೆ ನೀಡಲಾಗುವುದು ಎಂದರು.


ಪಕ್ಷಾತೀತವಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದ ಅವರು, ಸರ್ಕಾರ ತಕ್ಷಣವೇ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಅವರ ಬಾಕಿ ಬಿಲ್ ಮೊತ್ತವಾದ ೪.೨೪ ಕೋಟಿ ಹಣವನ್ನ ಬಿಡುಗಡೆ ಮಾಡಬೇಕು. ಅವರು ಸಾರ್ವಜನಿಕ ಕೆಲಸ ಮಾಡಿದ್ದಾರೆ. ತಮ್ಮ ಮನೆಯ ಒಡವೆ, ಇತರೆ ಆಸ್ತಿಯನ್ನು ಅಡವಿಟ್ಟು ದುಡ್ಡು ಖರ್ಚು ಮಾಡಿದ್ದಾರೆ. ಅವರ ಕುಟುಂಬಕ್ಕೆ ನೆರವು ನೀಡಬೇಕು. ವೀರಶೈವ ಮುಖಂಡರು, ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ನೆರವು ನೀಡಲು ಮತ್ತು ದೇಣಿಗೆಗೆ ಕೈ ಜೋಡಿಸಬೇಕು ಎಂದರು.


ಹೆಚ್.ಎಲ್. ಷಡಾಕ್ಷರಿ ಮಾತನಾಡಿ, ದೇವರ ಹೆಸರು ಹೇಳಿಕೊಂಡು ಪಲಾಯನ ಮಾಡಲು ಸಾಧ್ಯವೇ ಇಲ್ಲ. ಈಶ್ವರಪ್ಪನವರು ಈಗ ತಮಗೇನು ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಕೆಲವು ಬಿಜೆಪಿ ನಾಯಕರು ಟೆಂಡರ್ ಇಲ್ಲದೇ ಕಾಮಗಾರಿ ಮಾಡಿದ್ದು ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದರು.
ಹೆಚ್.ಸಿ. ಯೋಗೀಶ್ ಮಾತನಾಡಿ, ನೊಂದ ಜೀವಕ್ಕೆ ಸಹಾಯ ಮಾಡುವುದು ನಮ್ಮ ಸಮಾಜದ ಕರ್ತವ್ಯ ಎಂದು ಭಾವಿಸಿದ್ದೇವೆ. ಇಲ್ಲಿ ಯಾವ ಪಕ್ಷವೂ ಇಲ್ಲ. ರಾಜಕೀಯವೂ ಇಲ್ಲ. ಒಟ್ಟಾರೆ ವೀರಶೈವ ಲಿಂಗಾ ಯತ ಸಮಾಜದವರು ಮತ್ತು ಇತರೆ ಸಮಾಜದವರು ಕೂಡ ಕುಟುಂಬಕ್ಕೆ ನೆರವು ನೀಡಬೇಕು. ಬಾಕಿ ಬಿಲ್ ಪಾವತಿಸಿ, ಅವರ ಪತ್ನಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್.ಪಿ. ಗಿರೀಶ್, ಸುಧೀರ್, ಪಿ. ವೀರಮ್ಮ ಇದ್ದರು.

Exit mobile version