ಶಿವಮೊಗ್ಗ, ಏ.15:
ಸಚಿವ ಕೆ.ಎಸ್ ಈಶ್ವರಪ್ಪ ಅವರು ಈಗ ರಾಜೀನಾಮೆ ನೀಡುವುದಾಗಿ ಈಗ ಹೇಳಿರುವುದು ನೈತಿಕ ಹೊಣೆಗಾರಿಕೆಯದಲ್ಲ. ಪಕ್ಷಕ್ಕೆ ಮುಜುಗರವಾಗದಿರುವಂತೆ ನೋಡಿಕೊಳ್ಳಲು ನಾನು ರಾಜೀನಾಮೆ ನೀಡುತ್ತೇನೆ
ಎಂದಿರುವುದು ಸುಳ್ಳು. ಇದನ್ನು ಶಿವಮೊಗ್ಗ ಹಾಗೂ ರಾಜ್ಯದ ಜನ ನಂಬುವುದಿಲ್ಲ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆಬಿ ಪ್ರಸನ್ನಕುಮಾರ್ ಇಂದಿಲ್ಲಿ ಟೀಕಿಸಿದರು.
ಈ ಘಟನೆಯಲ್ಲಿ ಅವರ ಹೆಸರು ಪ್ರಸ್ತಾಪವಾದಾಕ್ಷಣ ಇಲ್ಲವೇ ಎಫ್ ಐ ಆರ್ ನಲ್ಲಿ ಬಂದಕೂಡಲೇ ರಾಜೀನಾಮೆ ನೀಡಬೇಕಿತ್ತು. ಇದು ನೈತಿಕವಾದುದೇ ಎಂದರು.
ಈ ಕೂಡಲೇ ಅವರನ್ನು ಬಂಧಿಸಬೇಕು. ಪಾರದರ್ಶವಾಗಿ ತನಿಖೆಯಾಗಬೇಕೆಂದರೆ ಅವರನ್ನು ಬಂಧಿಸಬೇಕು. ಹೈಕೋರ್ಟಿನ ಮುಖ್ಯ ನ್ಯಾಯಾದೀಶರಿಂದ ಈ ಬಗ್ಗೆ ತನಿಖೆ ನಡೆಯಬೇಕು. ಆಗ ಸತ್ಯಾಂಶ ಹೊರಬೀಳಲು ಸಾಧ್ಯ. ಇಲ್ಲದಿರೆ ನಾವು ಉಗ್ರ ಹೋರಾಟ ಮಾಡಲು ಸಿದ್ದ. ಅವರ ಕ್ಷೇತ್ರ ಶಿವಮೊಗ್ಗದಲ್ಲೆ ಮಾಡುತ್ತೇವೆ ಎಂದರು.