ಶಿವಮೊಗ್ಗ, ಏ.14:
ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಕಾರಣರಾದ ಸಚಿವ ಕೆಎಸ್ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕೆಂದು ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಆಹೋರಾತ್ರಿ ಧರಣಿ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ಜಮುಖಾನ ಹಾಸಿ ಪ್ರತಿಭಟಿಸಲಾಯಿತು. ನಿನ್ನೆ ಸಂಜೆಯ ಗಾಳಿ ಮಳೆಗೂ ಅಂಜದೇ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ NSUI ನ ಪ್ರಮುಖರಾದ ಮಧುಸೂದನ್, ಶಿವಕುಮಾರ್, ಚೇತನ್ ಪಕ್ಷದ ಹಿರಿಯರಾದ ದೇವೇಂದ್ರಪ್ಪ, ಎನ್. ರಮೇಶ್ ಸೇರಿದಂತೆ ಹಲವರಿದ್ದರು.
ಬೆಳಿಗ್ಗೆ ಏಳಕ್ಕೆ ದರಣಿ ಮುಗಿಸಲು ನಿರ್ಧರಿಸಲಾಗಿದೆ.