Site icon TUNGATARANGA

ಶಿವಮೊಗ್ಗದಲ್ಲೊಂದು ಸೂಪಿರೀಯರ್ ಕಲ್ಯಾಣ ಮಂದಿರ ಸಿದ್ದ, ಏ 15 ರಂದು ಉದ್ಘಾಟನೆ

ಶಿವಮೊಗ್ಗ: ಶ್ರೀ ಕನಕದಾಸ ಸೇವಾ ಟ್ರಸ್ಟ್ ವತಿಯಿಂದ ತೇವರ ಚಟ್ನಹಳ್ಳಿಯ ತರಳಬಾಳು ಬಡಾವಣೆಯಲ್ಲಿ ಸುಮಾರು 8 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ‘ಶುಭಶ್ರೀ’ ಸಮುದಾಯ ಭವನದ ಉದ್ಘಾಟನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏ.15ರಂದು ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಡಿ.ಸೋಮಸುಂದರಂ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮುದಾಯ ಭವನವು ಸುಮಾರು 1200 ಜನ ಆಸೀನರಾಗಬಹುದಾದಂತಹ ದೊಡ್ಡ ಸಭಾಂಗಣ ಹೊಂದಿದೆ. 500 ಜನ ಒಟ್ಟಿಗೆ ಕೂತು ಭೋಜನ ಮಾಡುವ ಭೋಜನಶಾಲೆಯ ವ್ಯವಸ್ಥೆಯನ್ನು ಹೊಂದಿದೆ ಎಂದರು. ಸಮುದಾಯ ಭವನದಲ್ಲಿ ಸೆಂಟ್ರಲೈಸ್ಟ್ ಏರ್‌ಕಂಡೀಷನ್ ವ್ಯವಸ್ಥೆ, ಪ್ರತ್ಯೇಕವಾದ ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್ ವ್ಯವಸ್ಥೆಯ ಜೊತೆಗೆ ಅತ್ಯಾಧುನಿಕವಾದ 24 ಸುಸಜ್ಜಿತ ಕೊಠಡಿಗಳಿವೆ. ಸ್ನಾನಕ್ಕಾಗಿ 24 ಗಂಟೆ ಬಿಸಿನೀರಿನ ವ್ಯವಸ್ಥೆ ಇದ್ದು, ಇದಕ್ಕಾಗಿ ಸೋಲಾರ್ ಹಾಗೂ ಹೀಟ್ ಪಂಪ್ ವ್ಯವಸ್ಥೆ, ವಿದ್ಯುತ್ ಜನರೇಟರ್‌ಗಳನ್ನು ಅಳವಡಿಸಲಾಗಿದೆ. ಈ ಭವನವು ಮದುವೆ ಮುಂತಾದ ಶುಭ ಕಾರ್ಯಗಳಿಗೆ ಅತ್ಯಂತ ಸೂಕ್ತವಾಗಿದೆ ಎಂದರು.3ಲಕ್ಷ ರೂ. ಬಾಡಿಗೆ ನಿಗದಿಪಡಿಸಲಾಗುತ್ತಿದ್ದು, ಇದರಲ್ಲಿ ವಿದ್ಯುತ್ ಹಾಗೂ ಸ್ವಚ್ಚತೆ, ಜಿಎಸ್‌ಟಿ ಸೇರಿದೆ ಎಂದ ಅವರು, ಉದ್ಘಾಟನಾ ಸಂದರ್ಭದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 10 ಜೋಡಿ ವಿವಾಹವಾಗಲಿದ್ದಾರೆ ಎಂದರು.

ಭವನದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶ್ರೀ ಕ್ಷೇತ್ರ ಕಾಗಿನೆಲೆಯ ಪೂಜ್ಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರು, ಜಗದ್ಗುರು ಮುರುಘಾಮಠ, ಆನಂದಪುರಂ ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು, ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳು, ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿಯವರು ವಹಿಸಲಿದ್ದು, ಭವನದ ಉದ್ಘಾಟನೆಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಟ್ರಸ್ಟ್ನ ಅಧ್ಯಕ್ಷ ಎಸ್. ಜ್ಞಾನೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಲೋಕಸಭೆ ಸದಸ್ಯ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಸ್. ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ವಿಧಾನಪರಿಷತ್ ಸದಸ್ಯ ರ್. ಪ್ರಸನ್ನಕುಮಾರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಿ. ಮೈಲಾರಪ್ಪ ಆಗಮಿಸಲಿದ್ದು, ಟ್ರಸ್ಟ್ನ ಗೌರವಾಧ್ಯಕ್ಷ ಎಂ. ಈಶ್ವರಪ್ಪ, ಮಾಜಿ ಜಿ.ಪಂ.ಸದಸ್ಯ ಕೆ.ಈ. ಕಾಂತೇಶ್ ಉಪಸ್ಥಿತರಿರಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಗೌರವಾಧ್ಯಕ್ಷ ಎಂ.ಈಶ್ವರಪ್ಪ, ಅಧ್ಯಕ್ಷ ಎಸ್. ಜ್ಞಾನೇಶ್ವರ್, ಉಪಾಧ್ಯಕ್ಷರಾದ ಮರಿಸ್ವಾಮಿ, ಪಿ.ಬಾಲಪ್ಪ, ಖಜಾಂಚಿ ಸಿ. ಹೊನ್ನಪ್ಪ, ಟ್ರಸ್ಟಿ ಮಂಜುನಾಥ್ ಎಸ್.ಓಲೇಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 

Exit mobile version