Site icon TUNGATARANGA

ಹಿಂದೂ ಮುಸ್ಲಿಂರೆಲ್ಲರೂ ಒಂದೇ ತಾಯಿ ಮಕ್ಕಳು, ಎಲ್ಲರೂ ಗೌರವದಿಂದ ಬದುಕಿ ಎಂದ ಯಡಿಯೂರಪ್ಪ ನೀಡಿದ ಎಚ್ಚರಿಕೆ ಮಾತೇನು?

The Chief Minister of Karnataka, Shri B.S. Yediyurappa meeting the Union Home Minister, Shri Amit Shah, in New Delhi on August 17, 2019.

Tunga Taranga, April,11, 2022 | Bangalore News
ರಾಜ್ಯದಲ್ಲಿ ಎಲ್ಲಾ ಹಿಂದೂ ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬಾಳಬೇಕೆಂಬುದು ನಮ್ಮ ಅಪೇಕ್ಷೆ. ಅದನ್ನು ಹಾಳು ಮಾಡುವ ಕೆಲಸವನ್ನು ಯಾರೂ ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲಾ ಒಟ್ಟಾಗಿ ಬಾಳಬೇಕು. ಕಿಡಿಗೇಡಿಗಳು ಇದೇ ವಿಚಾರ ಮುಂದಿಟ್ಟುಕೊಂಡು ಸಾಮರಸ್ಯಕ್ಕೆ ಅಡ್ಡಿ ಮಾಡಿದರೆ, ಅಹಿತಕರ ಘಟನೆಗಳಿಗೆ ಕಾರಣವಾದರೆ ಸರಕಾರ ಸಹಿಸುವುದಿಲ್ಲ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ ಎಂದರು.


ನಾನೂ ಸಹ ಅವರಿಗೆ ಕಿವಿ ಮಾತು ಹೇಳುವುದಕ್ಕೆ ಬಯಸುತ್ತೇನೆ, ನಿಮ್ಮ ನಿಮ್ಮ ಕೆಲಸ ಮಾಡಿ, ಮುಸ್ಲಿಮರೂ ಗೌರವದಿಂದ ಬದುಕಬೇಕು ಎಂದರು.

Exit mobile version